ಬಂಟ್ವಾಳ, ಜುಲೈ 27, 2021 (ಕರಾವಳಿ ಟೈಮ್ಸ್) : ತಾಲೂಕಿನ ಬಿ ಮೂಡ ಗ್ರಾಮದ ತಲಪಾಡಿ ನಿವಾಸಿ ಎನ್ ಅಬ್ಬಾಸ್ ಅವರ ಪತ್ನಿ ಬೀಪಾತಿಮ್ಮ ಅವರು ಭಾನುವಾರ ತನ್ನ ತಂಗಿ ಮನೆಯಾದ ನಂದಾವರಕ್ಕೆ ತೆರಳಿ ವಾಪಾಸು ಬರುತ್ತಿದ್ದ ವೇಳೆ ಅಟೋ ರಿಕ್ಷಾದಲ್ಲಿ ಬಂದು ತಲಪಾಡಿಯಲ್ಲಿ ಬಂದು ಇಳಿಯುವ ಸಂದರ್ಭ ರಿಕ್ಷಾ ಚಾಲಕ ಏಕಾಏಕಿ ಅಜಾರೂಗತೆಯಿಂದ ರಿಕ್ಷಾ ಮುಂದಕ್ಕೆ ಚಲಾಯಿಸಿದ ಪರಿಣಾಮ ಬೀಪಾತಿಮ್ಮ ಅವರು ಗಾಯಗೊಂಡಿದ್ದಾರೆ.
ಗಾಯಾಳು ಬೀಪಾತಿಮ್ಮ ಅವರು ಪರ್ಲಿಯಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಬಗ್ಗೆ ರಿಕ್ಷಾ ಚಾಲಕ ಉದಯ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಬೀಪಾತಿಮ್ಮ ಅವರು ನೀಡಿದ ದೂರಿನಂತೆ ಬಂಟ್ವಾಳ ಟ್ರಾಫಿಕ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 67/2021 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment