ಬಂಟ್ವಾಳ, ಜುಲೈ 11, 2021 (ಕರಾವಳಿ ಟೈಮ್ಸ್) : ಕರ್ನಾಟಕ ಮುಸ್ಲಿಂ ಜಮಾಅತ್ ಅಧೀನದ ತುರ್ತು ಸೇವಾ ತಂಡ “ಸಹಾಯ್” ವತಿಯಿಂದ ಭಾನುವಾರ ಬಂಟ್ವಾಳ ತಾಲೂಕು ಆಸ್ಪತ್ರೆ ವಠಾರ, ಕೈಕಂಬ ಸಂಚಾರಿ ಆಸ್ಪತ್ರೆ ವಠಾರ, ಬಿ ಸಿ ರೋಡು ರಾಷ್ಟ್ರೀಯ ಹೆದ್ದಾರಿಯ ರಸ್ತೆ ಬದಿಗಳನ್ನು ಸ್ವಚ್ಛಗೊಳಿಸಲಾಯಿತು.
ಕರ್ನಾಟಕ ಮುಸ್ಲಿಂ ಜಮಾಅತ್ “ನಿರ್ಮಲ ಮನಸ್ಸು ನೈರ್ಮಲ್ಯ ಪರಿಸರ” ಯೋಜನೆಯಡಿಯಲ್ಲಿ ರಾಜ್ಯಾಧ್ಯಂತ ಸ್ವಚ್ಚತಾ ಅಭಿಯಾನವನ್ನ ಕೈಗೊಂಡಿದ್ದು ಈಗಾಗಲೇ ಜಿಲ್ಲಾ ಸಹಾಯ್ ತಂಡದ ವತಿಯಿಂದ ಮಂಗಳೂರಿನ ವೆನ್ಲಾಕ್ ಪರಿಸರವನ್ನು ಸ್ವಚ್ಚಗೊಳಿಸಲಾಗಿತ್ತು. ಜಿಲ್ಲಾ ಸಮಿತಿಯ ಅಧೀನದಲ್ಲಿ ಹದಿಮೂರು ಸರ್ಕಲ್‍ಗಳು ಕಾರ್ಯಚರಿಸುತ್ತಿದ್ದು, “ಸಹಾಯ್ ಬಂಟ್ವಾಳ ಸರ್ಕಲ್” ಕೂಡ ಇದರ ಭಾಗವಾಗಿದೆ.
ಬಂಟ್ವಾಳ ಸರ್ಕಲ್ ವತಿಯಿಂದ ಆಯೋಜಿಸಿದ್ದ ಸ್ವಚ್ಚತಾ ಅಭಿಯಾನಕ್ಕೆ ಡೈರೆಕ್ಟರ್ ಇಬ್ರಾಹಿಂ ಸಖಾಫಿ ಸೆರ್ಕಳ ದುಆ ಮೂಲಕ ಚಾಲನೆ ನೀಡಿದರು. ಕರ್ನಾಟಕ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಅನ್ವರ್ ಹಾಜಿ ಗೂಡಿನಬಳಿ ಉಧ್ಘಾಟಿಸಿದರು. ಸಿನಾನ್ ಸಖಾಫಿ ಅಜಿಲಮೊಗರು ಸಹಾಯ್ ಕಾರ್ಯಾಚರಣೆಯ ಬಗ್ಗೆ ವಿವರಿಸಿದರು. ಬಂಟ್ವಾಳ ತಾಲೂಕು ಆಸ್ಪತ್ರೆಯ ವೈದ್ಯ ಡಾ ಸಂದೀಪ್ ಪ್ರಸ್ತಾವನೆಗೈದರು.
ಪ್ರಸ್ತುತ ಸ್ವಚ್ಚತಾ ಅಭಿಯಾನದಲ್ಲಿ ಬಂಟ್ವಾಳ ಪುರಸಭಾ ಕಿರಿಯ ಸಹಾಯಕ ಇಂಜಿನಿಯರ್ ಮುಹಮ್ಮದ್ ಇಕ್ಬಾಲ್, ಕೆಸಿಎಫ್ ಪ್ರಮುಖ ಹಂಝ ಮೈಂದಾಳ, ರಶೀದ್ ಹಾಜಿ ವಗ್ಗ, ಶರೀಫ್ ನಂದಾವರ, ಅಕ್ಬರ್ ಅಲಿ ಮದನಿ ಆಲಂಪಾಡಿ, ಅಲಿ ಮದನಿ ಸೆರ್ಕಳ, ಇರ್ಶಾದ್ ಹಾಜಿ ಗೂಡಿನಬಳಿ, ಅಸ್ಲಂ ಸಂಪಿಲ, ಹಂಝ ಮಂಚಿ, ರಫೀಕ್ ಹಾಜಿ ಕಿಸ್ವಾ ಮೊದಲಾದವರು ಭಾಗವಹಿಸಿದ್ದರು. ಸ್ವಚ್ಛತಾ ಕಾರ್ಯದಲ್ಲಿ ಬಂಟ್ವಾಳ ಸರ್ಕಲ್ ವ್ಯಾಪ್ತಿಯ ಎಸ್ಸೆಸ್ಸೆಫ್, ಎಸ್‍ವೈಎಸ್ಸಿನ 80ರಷ್ಟು ಕಾರ್ಯಕರ್ತರು ಭಾಗವಹಿಸಿದ್ದರು.
0 comments:
Post a Comment