ಬಂಟ್ವಾಳ, ಜುಲೈ 08, 2021 (ಕರಾವಳಿ ಟೈಮ್ಸ್) : ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಎಲ್ ಎಚ್ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಬಂಟ್ವಾಳ ತಾಲೂಕಿನ ವಾಮದಪದವು ಸರಕಾರಿ ಆಸ್ಪತ್ರೆಗೆ 75 ಬೆಡ್ ಶೀಟ್ ವಿತರಣೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಹಾಗೂ ಬಂಟ್ವಾಳ ತಾಲೂಕು ಯೋಜನಾ ಕಚೇರಿಯ ಯೋಜನಾಧಿಕಾರಿ ಜಯಾನಂದ ಪಿ ಇವರುಗಳು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಉಮೇಶ್ ಅಡ್ಯಂತಾಯ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ದಂತ ವೈದ್ಯ ಡಾ ಅಕ್ಷತ ನಾಯಕ್, ಆಯುಷ್ ವೈದ್ಯೆ ವಸುಧಾ ಜಯಂ, ಆಫೀಸ್ ಸೂಪರಿಡೆಂಟ್ ಐವನ್ ಕುಟ್ಟಿನ್, ರೇಡಿಯೋಲಜಿ ಆಫೀಸರ್ ಅಬ್ದುಲ್ ರಶೀದ್, ಆರೋಗ್ಯ ಮಿತ್ರ ಸೌಮ್ಯ ಮಾಧವ ಹಾಗೂ ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷ ಶ್ರೀಧರ್ ಪೈ, ಜನಜಾಗೃತಿ ವೇದಿಕೆಯ ಸದಸ್ಯ ನವೀನ್ ಚಂದ್ರ, ವಲಯ ಮೇಲ್ವಿಚಾರಕ ಶಿವರಂಜನ್ ಹಾಗೂ ಸ್ಥಳೀಯ ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು.
0 comments:
Post a Comment