ಬಂಟ್ವಾಳ, ಜುಲೈ 21, 2021 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಬುಧವಾರವೂ ಹಲವು ಮಳೆ ಹಾನಿ ಪ್ರಕರಣಗಳು ವರದಿಯಾಗಿದೆ. ಪೆ
ರಾಜೆ ಗ್ರಾಮದ ಮಡಲ ನಿವಾಸಿ ಕೆ ಆರ್ ಸುವರ್ಣ ಕೋಂ ರಾಮ ಮೂಲ್ಯ ಅವರ ಮನೆಯ ಕಂಪೌಂಡ್ ಜರಿದು ಹಾನಿ ಸಂಭವಿಸಿದೆ. ಕೆದಿಲ ಗ್ರಾಮದ ಮೀನಾಕ್ಷಿ ಕೋಂ ಸಣ್ಣ ಮೇರಾ ಅವರ ಮನೆಗೆ ಅಡಿಕೆ ಮರ ಬಿದ್ದು ಭಾಗಶಃ ಹಾನಿ ಸಂಭವಿಸಿದೆ. ಸಜಿಪಮುನ್ನೂರು ಗ್ರಾಮದ ಆಲಾಡಿ ನಿವಾಸಿ ಸೂರ್ಯನಾರಾಯಣ ಭಟ್ ಅವರ ಮನೆ ಮೇಲೂ ಅಡಿಕೆ ಮರ ಬಿದ್ದು ಹಾನಿ ಸಂಭವಿಸಿದೆ. ನೆಟ್ಲಮುಡ್ನೂರು ಗ್ರಾಮದ ಏಮಾಜೆ ನಿವಾಸಿ ರಾಮ ನಲ್ಕೆ ಬಿನ್ ಅಲಂಬರ ನಲ್ಕೆ ಅವರ ಅಡಿಕೆ ತೋಟದ ಅಡಿಕೆ ಮರಗಳು ಗಾಳಿ ಮಳೆಗೆ ಹಾನಿಯಾಗಿದೆ. ಅನಂತಾಡಿ ಗ್ರಾಮದ ಬೊಗ್ಗಂಡ ನಿವಾಸಿ ಲೀಲಾ ಕೊಂ ಕೇಶವ ಪೂಜಾರಿ ಅವರ ಕಚ್ಚಾ ಮನೆ ಜುಲೈ 17 ರಂದು ಭಾಗಶಃ ಹಾನಿಯಾದ ಬಗ್ಗೆ ವರದಿ ಸಲ್ಲಿಸಲಾಗಿದ್ದು ಬುಧವಾರ ಮತ್ತೆ ಮನೆಯ ಒಂದು ಗೋಡೆಗೆ ಭಾಗಶಃ ಹಾನಿಯಾಗಿರುತ್ತದೆ. ತಾಲೂಕಿನ ಜೀವ ನದಿ ನೇತ್ರಾವತಿ ಇದೀಗ 3 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದು ಆತಂಕ ದೂರವಾಗಿದೆ ಎಂದು ತಾಲೂಕು ಕಛೇರಿ ಮಾಹಿತಿ ತಿಳಿಸಿದೆ.
0 comments:
Post a Comment