ಪುತ್ತೂರು, ಜುಲೈ 04, 2021 (ಕರಾವಳಿ ಟೈಮ್ಸ್) : ತಾಲೂಕಿನ ಕೆಮ್ಮಿಂಜೆ ಗ್ರಾಮದ ಕಲ್ಲಗುಡ್ಡೆ ಎಂಬಲ್ಲಿ ಪರವಾನಿಗೆ ರಹಿತವಾಗಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ವಿವಿಧ ಬ್ರಾಂಡಿಗೆ ಸೇರಿದ ಅಕ್ರಮ ಮದ್ಯ ಸಹಿತ ಇಬ್ಬರು ಆರೋಪಿಗಳಳನ್ನು ಶನಿವಾರ ದಸ್ತಗಿರಿ ಮಾಡಿದ್ದಾರೆ.
ಬಂಧಿತ ಆರೋಪಿಗಳನ್ನು ಸ್ಥಳೀಯ ನಿವಾಸಿಗಳಾದ ದಿವಂಗತ ಬಟ್ಯಪ್ಪ ಪೂಜಾರಿ ಅವರ ಪುತ್ರ ಬಾಬು ಪೂಜಾರಿ (48) ಹಾಗೂ ಚಲ್ಲ ಎಂಬವರ ಪುತ್ರ ಗಣೇಶ (32) ಎಂದು ಹೆಸರಿಸಲಾಗಿದೆ.
ಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದ ಕಲ್ಲಗುಡ್ಡೆ ಎಂಬಲ್ಲಿ ಯಾವುದೇ ಪರವಾಣಿಗೆ ಹೊಂದದೇ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆ ಎಂಬುದಾಗಿ ದೊರೆತ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪುತ್ತೂರು ನಗರ ಪಿಎಸ್ಸೈ ಜಂಬೂರಾಜ್ ಮಹಾಜನ್ ನೇತೃತ್ವದ ಪೊಲೀಸರು ಸ್ಥಳದಲ್ಲಿದ್ದ ವಿವಿಧ ಬ್ರಾಂಡ್ ಗಳೆಂದು ಬರೆದು ಹಾಕಲಾಗಿದ್ದ 180 ಎಂಎಲ್ ನ 15,260/- ರೂಪಾಯಿ ಮೌಲ್ಯದ 218 ಸ್ಯಾಚೆಟ್, 90 ಎಂಎಲ್ ನ 2,065/- ರೂಪಾಯಿ ಮೌಲ್ಯದ 59 ಸ್ಯಾಚೆಟ್, 180 ಎಂಎಲ್ ನ 1,590/- ರೂಪಾಯಿ ಮೌಲ್ಯದ 15 ಸ್ಯಾಚೆಟ್, 330 ಎಂಎಲ್ ನ 1,448/- ರೂಪಾಯಿ ಮೌಲ್ಯದ 24 ಬಾಟ್ಲಿಗಳು, 650 ಎಂಎಲ್ ನ 2,180/- ರೂಪಾಯಿ ಮೌಲ್ಯದ 19 ಬಾಟ್ಲಿಗಳು, 180 ಎಂಎಲ್ ನ 430/- ರೂಪಾಯಿ ಮೌಲ್ಯದ 5 ಸ್ಯಾಚೆಟ್, 180 ಎಂಎಲ್ ನ 525/- ರೂಪಾಯಿ ಮೌಲ್ಯದ 3 ಬಾಟ್ಲಿಗಳು ಹಾಗೂ 180 ಎಂಎಲ್ ನ 1780/- ರೂಪಾಯಿ ಮೌಲ್ಯದ 9 ಬಾಟ್ಲಿಗಳು ಅಕ್ರಮ ಮದ್ಯ ಹಾಗೂ ಆರೋಪಿಗಳು ಮದ್ಯ ಮಾರಾಟ ಮಾಡಿ ಬಂದ ಹಣ 800/-ರೂಪಾಯಿ ನಗದು ಹಣ ವಶಪಡಿಸಿಕೊಳ್ಳಲಾಗಿದ್ದು, ಪೊಲೀಸರು ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 26,118/- ರೂಪಾಯಿಗಳು ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 53/2021 ಕಲಂ 14, 15, 32, 34 ಕೆಇಎ ಆಕ್ಟ್ ಪ್ರಕಾರ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
0 comments:
Post a Comment