ಬಂಟ್ವಾಳ, ಜುಲೈ 15, 2021 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಸಮೀಪದ ಆಲಡ್ಕದಲ್ಲಿ ಗುರುವಾರ ಮೇಯಲು ಬಿಟ್ಟಿದ ದನ ಆಯತಪ್ಪಿ ಚರಂಡಿ ಗುಂಡಿಯಲ್ಲಿ ಬಿದ್ದು ಒದ್ದಾಡಿದ್ದು, ಬಳಿಕ ಸ್ಥಳೀಯ ನಿವಾಸಿಗಳು ರಕ್ಷಿಸಿದರು.
ಸ್ಥಳೀಯ ನಿವಾಸಿ ರೈತರೊಬ್ಬರಿಗೆ ಸೇರಿದ ಜಾನುವಾರು ಇದಾಗಿದ್ದು, ಇದು ಮೇವು ಅರಸುತ್ತಾ ಆಲಡ್ಕ ಮೈದಾನದತ್ತ ಬಂದಿತ್ತು. ಮೇಯುತ್ತಾ ರಸ್ತೆ ಬದಿ ಬಂದಿದ್ದ ದನ ಚರಂಡಿಯ ಚಪ್ಪಡಿ ಕಲ್ಲು ಬದಿಗೆ ಸರಿದಿರುವುದು ಗಮನಕ್ಕೆ ಬಾರದೆ ಅದರೊಳಗೆ ಬಿದ್ದು ಅರ್ಧ ದೇಹ ಚರಂಡಿಯಲ್ಲಿ ಅರ್ಧ ದೇಹ ಮೇಲ್ಭಾಗಕ್ಕೆ ಕಾಣುವಂತಹ ಸ್ಥಿತಿಯಲ್ಲಿತ್ತು. ಇದನ್ನು ಕಂಡ ಸ್ಥಳೀಯ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಅವರು ಜೆಸಿಬಿ ತರಿಸಿ ಚರಂಡಿಯ ಇನ್ನೊಂದು ಚಪ್ಪಡಿಯನ್ನು ಕೂಡಾ ಬದಿಗೆ ಸರಿಸಲು ಸಹಕರಿಸಿದರು. ಸ್ಥಳೀಯರಾದ ಹಮೀದ್ ಅಲಿ ಯು, ರಫೀಕ್ ಡ್ರೈವರ್, ಅಬ್ದುಲ್ ಖಾದರ್ ಚಪ್ಪು, ಕಬೀರ್, ರಶೀದ್, ಇಝಾವುದ್ದೀನ್ ಅಲಿ ಮೊದಲಾದವರು ಜಾನುವಾರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಜಾನುವಾರಿಗೆ ಯಾವುದೇ ಗಾಯವಾಗಲೀ, ಅಪಾಯವಾಗಲೀ ಸಂಭವಿಸದೆ ಸುರಕ್ಷಿತವಾಗಿ ಮತ್ತೆ ಮೇಯಲು ತೆರಳಿದೆ ಹಾಗೂ ಬಾಯಿ ತೆರೆದ ಚರಂಡಿಯ ಕಲ್ಲನ್ನು ಮುಚ್ಚಿ ಸುಸ್ಥಿತಿಗೆ ತರಲಾಗಿದೆ ಎಂದು ಕಾರ್ಯಾಚರಣೆ ನಡೆಸಿದ ಯುವಕರು ತಿಳಿಸಿದ್ದಾರೆ.
0 comments:
Post a Comment