ಬಂಟ್ವಾಳ, ಜುಲೈ 21, 2021 (ಕರಾವಳಿ ಟೈಮ್ಸ್) : 2021-22ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಮಂಗಳೂರು ಸಂತ ಎಲೋಶಿಯಸ್ ಪದವಿಪೂರ್ವ ಕಾಲೇಜು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಅಝಲಿಯಾ ಫಾತಿಮಾ 596 ಅಂಕಗಳನ್ನು ಗಳಿಸಿ 99.33 ಫಲಿತಾಂಶ ದಾಖಲಿಸಿದ್ದಾಳೆ.
ಈಕೆ ಭಾಷಾವಾರು ವಿಷಯಗಳಾದ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ತಲಾ 98 ಅಂಕಗಳನ್ನು ಗಳಿಸಿದರೆ, ಉಳಿದ ಎಲ್ಲಾ ವಿಷಯಗಳಲ್ಲಿ ತಲಾ 100 ಪೂರ್ತಿ ಅಂಕಗಳನ್ನು ಗಳಿಸಿರುತ್ತಾಳೆ.
ಈಕೆ ಬಂಟ್ವಾಳ ತಾಲೂಕು, ಪಾಣೆಮಂಗಳೂರು ಗ್ರಾಮದ, ಮೆಲ್ಕಾರ್ ಸಮೀಪದ ರೆಂಗೇಲು ನಿವಾಸಿ ಅಬೂಬಕ್ಕರ್-ಝೊಹರಾ ದಂಪತಿಯ ಪುತ್ರಿಯಾಗಿದ್ದಾಳೆ.
0 comments:
Post a Comment