ಬಂಟ್ವಾಳ, ಜುಲೈ 15, 2021 (ಕರಾವಳಿ ಟೈಮ್ಸ್) : ಮೊಡಂಕಾಪು ರೋಟರಿ ಕ್ಲಬ್ ವತಿಯಿಂದ ಬಂಟ್ವಾಳ ತಾಲೂಕಿನ 6200 ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೋವಿಡ್ ಸುರಕ್ಷತಾ ದೃಷ್ಟಿಯಿಂದ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಮಾಸ್ಕ್ ವಿತರಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಅವರು ಮಾಸ್ಕ್ ವಿತರಿಸಿದರು. ಮೊಡಂಕಾಪು ರೋಟರಿ ಕ್ಲಬ್ ಅಧ್ಯಕ್ಷ ಎಲಿಯಾಸ್ ಸ್ಯಾಕ್ಟಿಸ್, ಮೊಡಂಕಾಪು ರೋಟರಿ ಕ್ಲಬ್ ಚುನಾಯಿತ ಅದ್ಯಕ್ಷ ರೋ ಗೋವರ್ಧನ್ ರಾವ್, ಕೋಶಾಧಿಕಾರಿ ರೊ ಶೃತಿ ಮಾಡ್ತ, ಶಿಕ್ಷಣ ಸಂಯೋಜಕಿ ಸುಜಾತ, ದೈಹಿಕ ಪರಿವೀಕ್ಷಕ ವಿಷ್ಣು ಹೆಬ್ಬಾರ್, ಸ್ಕೌಟ್ ಜಿಲ್ಲಾ ಸಂಘಟಕ ಭರತ್ ರಾಜ್, ಸ್ಕೌಟ್ ಜಿಲ್ಲಾ ತರಬೇತಿ ಆಯುಕ್ತ ಪ್ರತಿಮ್ ಕುಮಾರ್ ಎಸ್, ಎಸ್ಸೆಸ್ಸೆಲ್ಸಿ ಸ್ವಯಂ ಸೇವಕರ ಜಿಲ್ಲಾ ನೋಡೆಲ್ ತ್ಯಾಗಂ ಹರೇಕಳ ಮೊದಲಾದವರು ಇದ್ದರು.
0 comments:
Post a Comment