ಬಂಟ್ವಾಳ, ಜುಲೈ 30, 2021 (ಕರಾವಳಿ ಟೈಮ್ಸ್) : ತಾಲೂಕಿನ ರಾಯಿ ಗ್ರಾಮದ ಬಜಲೋಡಿ ನಿವಾಸಿಗಳಾದ ಕೃಷ್ಣಪ್ಪ ಪೂಜಾರಿ ಅವರ ಪುತ್ರ ಸಂದೇಶ ಹಾಗೂ ಅವರ ಮಾವ ರಮೇಶ ಅವರು ಗುರುವಾರ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವೇಳೆ ಕೊಯಿಲ ಗ್ರಾಮದ ಮಾವಂತೂರು ಮಹಾಗಣಪತಿ ದೇವಸ್ಥಾನ ಬಳಿ ಬಂಟ್ವಾಳ ಕಡೆಯಿಂದ ಧಾವಿಸಿ ಬಂದ ಕಾರು ಡಿಕ್ಕಿಯಾಗಿ ಇಬ್ಬರೂ ಗಾಯಗೊಂಡಿದ್ದಾರೆ.
ಸಂದೇಶ ಹಾಗೂ ರಮೇಶ ಅವರು ಬಂಡಸಾಲೆಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವೇಳೆ ಮಾವಂತೂರು ಬಳಿ ಈ ಅವಘಢ ಸಂಭವಿಸಿದ್ದು, ಕಾರು ಚಾಲಕ ಮುಹಮ್ಮದ್ ಮುಬೀನ್ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ರಾಂಗ್ ಸೈಡ್ ಚಾಲನೆ ನಡೆಸಿರುವುದೇ ಘಟನೆಗೆ ಕಾರಣ ಎಂದು ಸಂದೇಶ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಶುಕ್ರವಾರ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 70/2021 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment