ಬಂಟ್ವಾಳ, ಜುಲೈ 18, 2021 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಸುರಿಯುತ್ತಿದ್ದ ತೀವ್ರ ಮಳೆ ಕಾರಣದಿಂದಾಗಿ ಶನಿವಾರ ರಾತ್ರಿ ಬಿ ಸಿ ರೋಡು- ಪೂಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಯ ಕೆಳಗಿನ ವಗ್ಗ ಸಮಿಪದ ಆಲಂಪುರಿ ಕ್ರಾಸ್ ಬಳಿ ರಸ್ತೆ ಬದಿಯ ಗುಡ್ಡ ಜರಿದು ಮಣ್ಣು ಹೆದ್ದಾರಿಗೆ ಬಿದ್ದಿದೆ.
ಬಿ ಸಿ ರೋಡು-ಪೂಂಜಾಲಕಟ್ಟೆ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಇದೀಗ ಮಳೆಗಾಲದಲ್ಲಿ ಅಲ್ಲಲ್ಲಿ ಕೆಲವೊಂದು ಅವಾಂತರಗಳು ನಡೆಯುತ್ತಿದೆ. ಇದೀಗ ವಗ್ಗದಲ್ಲಿ ಹೆದ್ದಾರಿ ಬದಿಯ ಗುಡ್ಡ ಜರಿದು ಮಣ್ಣು ರಸ್ತೆಗೆ ಬಿದ್ದಿರುವುದರಿಂದ ವಾಹನ ಸವಾರರು ಆತಂಕ ಎದುರಿಸುವಂತಾಗಿದೆ. ಹೆದ್ದಾರಿಗೆ ಬಿದ್ದಿರುವ ಮಣ್ಣನ್ನು ಜೆಸಿಬಿ ಬಳಸಿ ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆಯಾದರೂ ಪರಿಸರದಲ್ಲಿ ರಸ್ತೆಯಿಡೀ ಕೆಸರಿನ ಕೊಂಪೆಯಾಗಿದ್ದು, ವಾಹನ ಹಾಗೂ ಜನ ಸಂಚಾರ ದುಸ್ತರವಾಗಿದೆ. ಅಧಿಕಾರಿಗಳ ಎಡವಟ್ಟು ಹಾಗೂ ಅವೈಜ್ಞಾಕ ಕಾಮಗಾರಿಯಿಂದಾಗಿ ಇಂತಹ ಅವಾಂತರಗಳು ನಡೆಯುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
0 comments:
Post a Comment