ಬಂಟ್ವಾಳ, ಜುಲೈ 27, 2021 (ಕರಾವಳಿ ಟೈಮ್ಸ್) : ತಾಲೂಕಿನ ಕಡೇಶ್ವಾಲ್ಯ ಗ್ರಾಮದ ಪೆರ್ಲಾಪು ನಿವಾಸಿ ತನಿಯಪ್ಪ ಶೆಟ್ಟಿ ಅವರ ಪುತ್ರ ಸದಾಶಿವ ಶೆಟ್ಟಿ ಅವರ ಜಮೀನಿನಲ್ಲಿ ಬೆಳೆಸಿದ್ದ ಶ್ರೀಗಂಧದ ಮರವನ್ನು ಕಳ್ಳರು ರಾತೋರಾತ್ರಿ ಬುಡ ಸಮೇತ ಕಿತ್ತುಕೊಂಡು ಹೋಗಿರುವ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.
ಸದಾಶಿವ ಶೆಟ್ಟಿ ಅವರು ಸರ್ವೆ ನಂಬ್ರ 263/1ಎ7 ರಲ್ಲಿ 0-52 ಎಕ್ರೆ ಜಮೀನಿನಲ್ಲಿ ಕೃಷಿ ಮಾಡಿಕೊಂಡಿದ್ದು, ಈ ಪೈಕಿ ಕಳೆದ 15 ವರ್ಷಗಳಿಂದ ಒಂದು ಶ್ರೀಗಂಧದ ಮರವನ್ನು ನೆಟ್ಟು ಬೆಳೆಸಿದ್ದರು. ಸೋಮವಾರ ರಾತ್ರಿ ಮನೆ ಮಂದಿ ಮಲಗಿದ್ದ ವೇಳೆ ಕಳ್ಳರು ಜಮೀನಿಗೆ ಪ್ರವೇಶಿಸಿ ಶ್ರೀಗಂಧದ ಮರವನ್ನು ಬುಡ ಸಮೇತ ಕಡಿದು ಪರಾರಿಯಾಗಿದ್ದಾರೆ. ಕಳವಾಗಿರುವ ಶ್ರೀಗಂಧದ ಮರದ ಮೌಲ್ಯ ಸುಮಾರು 30 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ.
0 comments:
Post a Comment