ಜೆಇಇ ಮೇನ್ಸ್ ಪರೀಕ್ಷೆ ಎರಡು ಆವೃತ್ತಿಯಲ್ಲಿ : ಜುಲೈ 20 ರಿಂದ 25 ಹಾಗೂ ಜುಲೈ 27 ರಿಂದ ಆಗಸ್ಟ್ 2ರವರೆಗೆ  - Karavali Times ಜೆಇಇ ಮೇನ್ಸ್ ಪರೀಕ್ಷೆ ಎರಡು ಆವೃತ್ತಿಯಲ್ಲಿ : ಜುಲೈ 20 ರಿಂದ 25 ಹಾಗೂ ಜುಲೈ 27 ರಿಂದ ಆಗಸ್ಟ್ 2ರವರೆಗೆ  - Karavali Times

728x90

6 July 2021

ಜೆಇಇ ಮೇನ್ಸ್ ಪರೀಕ್ಷೆ ಎರಡು ಆವೃತ್ತಿಯಲ್ಲಿ : ಜುಲೈ 20 ರಿಂದ 25 ಹಾಗೂ ಜುಲೈ 27 ರಿಂದ ಆಗಸ್ಟ್ 2ರವರೆಗೆ 

 ನವದೆಹಲಿ, ಜುಲೈ 07, 2021 (ಕರಾವಳಿ ಟೈಮ್ಸ್) : ಜೆಇಇ ಮೇನ್ಸ್- 2021 ಪರೀಕ್ಷೆಗಳು ಎರಡು ಆವೃತ್ತಿಗಳಲ್ಲಿ ನಡೆಯಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ತಿಳಿಸಿದ್ದಾರೆ.  

ಜೆಇಇ ಮೇನ್ಸ್ ಮೊದಲ ಆವೃತ್ತಿಯ ಪರೀಕ್ಷೆಗಳು ಜುಲೈ 20 ರಿಂದ 25 ರವರೆಗೆ ನಡೆಯಲಿದ್ದು ಎರಡನೇ ಆವೃತ್ತಿ ಜುಲೈ 27 ರಿಂದ ಆಗಸ್ಟ್ 2 ರವರೆಗೆ ನಡೆಯಲಿದೆ.  

 ಕೊರೋನಾ ವೈರಸ್ ಹಾಗೂ ಲಾಕ್ ಡೌನ್ ಕಾರಣದಿಂದ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಮೊದಲ ಆವೃತ್ತಿಯಲ್ಲಿ ಪರೀಕ್ಷೆಗೆ ಕೂರುವ ವಿದ್ಯಾರ್ಥಿಗಳು ಜುಲೈ 6 ರಿಂದ ಜುಲೈ 8ರ ರಾತ್ರಿಯವರೆಗೆ ಎನ್ ಟಿಎ ನಲ್ಲಿ ಅರ್ಜಿಗಳನ್ನು ಪಡೆಯಬಹುದು.  ಎರಡನೇ ಆವೃತ್ತಿಯಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಜುಲೈ 9 ರಿಂದ ಜುಲೈ 12 ರವರೆಗೆ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ಅದೇ ರೀತಿ ಅಭ್ಯರ್ಥಿಗಳು ತಮ್ಮ ಪರೀಕ್ಷಾ ಕೇಂದ್ರಗಳನ್ನು ಬದಲಾಯಿಸಲು ಕೂಡಾ ಅವಕಾಶ ಕಲ್ಪಿಸಲಾಗಿದೆ

  • Blogger Comments
  • Facebook Comments

0 comments:

Post a Comment

Item Reviewed: ಜೆಇಇ ಮೇನ್ಸ್ ಪರೀಕ್ಷೆ ಎರಡು ಆವೃತ್ತಿಯಲ್ಲಿ : ಜುಲೈ 20 ರಿಂದ 25 ಹಾಗೂ ಜುಲೈ 27 ರಿಂದ ಆಗಸ್ಟ್ 2ರವರೆಗೆ  Rating: 5 Reviewed By: karavali Times
Scroll to Top