ಬಂಟ್ವಾಳ, ಜುಲೈ 15, 2021 (ಕರಾವಳಿ ಟೈಮ್ಸ್) : ಆಧುನಿಕ ತಂತ್ರಜ್ಞಾನದ ಮೂಲಕ ಗ್ರಾಮೀಣ ಪ್ರದೇಶದ ರೈತರಿಗೆ ಲಾಭದಾಯಕ ಉದ್ಯಮವಾಗಿ ಪರಿವರ್ತಿಸುವ ಕುರಿ ಮತ್ತು ಮೇಕೆ ಸಾಕಾಣಿಕಾ ಕೇಂದ್ರವನ್ನು ಶಿರೋಹಿ ಫಾರ್ಮ್ ಸಂಸ್ಥೆಯ ವತಿಯಿಂದ ಇರಾ ಗ್ರಾಮದ ಪರ್ಲಡ್ಕದಲ್ಲಿ ಇತ್ತೀಚೆಗೆ ಆರಂಭಗೊಂಡಿತು.
ಇರಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಅಬ್ದುಲ್ ರಝಾಕ್ ಕುಕ್ಕಾಜೆ ಅವರು ಕೇಂದ್ರ ಉದ್ಘಾಟಿಸಿ ಶುಭ ಹಾರೈಸಿದರು. ಇ
ರಾ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮೊಯಿದಿನ್ ಕುಂಞಿ, ಶಿರೋಹಿ ಫಾರ್ಮ್ ನಾಮಾಂಕಿತ ಮೈಂಡ್ ಓವೆಷನ್ ಸಂಸ್ಥೆಯ ಶ್ರೀನಿವಾಸ್ ಗೌಡ, ಸಂಸ್ಥಾಪಕ ಅಧ್ಯಕ್ಷರು ಮತ್ತು ಎಂ.ಡಿ, (ಐಸಿರಿ) ಮೈಂಡ್ ಓವೆಷನ್ಸ್, ಶ್ರೀಮತಿ ಜಯಶ್ರೀ ಆರ್ ಕರ್ಕೇರ, ಸಹ-ಸಂಸ್ಥಾಪಕರು ಮತ್ತು ನಿರ್ದೇಶಕರು, (ಐಸಿರಿ) ಮೈಂಡ್ ಓವೆಷನ್ಸ್, ಶ್ರೀಕಾಂತ್ ಕರ್ಕೇರ, ಸಂಸ್ಥಾಪಕ ಅಧ್ಯಕ್ಷರು ಹಾಗೂ ಯುವಕ ಮಂಡಲ ಇರಾ ಇದರ ಮಾಜಿ ಅಧ್ಯಕ್ಷ ಜಯರಾಜ್ ಇರಾ ಉಪಸ್ಥಿತರಿದ್ದರು.
ಇರಾ ಗ್ರಾಮ ಮತ್ತು ಸುತ್ತಮುತ್ತಲಿನ ಸ್ವ ಉದ್ಯೋಗ ಆಸಕ್ತ ಯುವಕರು ಹಾಗೂ ರೈತ ಭಾಂಧವರು ಇದರ ಸದುಪಯೋಗ ಪಡೆದುಕೊಳ್ಳಲು ಶಿರೋಹಿ ಫಾರ್ಮ್ ನ ವ್ಯವಸ್ಥಾಪಕರು ವಿನಂತಿಸಿದ್ದಾರೆ.
0 comments:
Post a Comment