ದಕ್ಷಿಣ ಕನ್ನಡ : ಮತ್ತೆ ಅನ್‍ಲಾಕ್ ಮಾರ್ಗಸೂಚಿ ಬದಲಾವಣೆ, ಸಂಜೆ 5ರವರೆಗೂ ಎಲ್ಲವೂ ಓಪನ್, ವೀಕೆಂಡ್ ಕರ್ಫ್ಯೂ ವೇಳೆ ಮಧ್ಯಾಹ್ನ 2ರವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ : ಡೀಸಿ ರಾಜೇಂದ್ರ ಆದೇಶ - Karavali Times ದಕ್ಷಿಣ ಕನ್ನಡ : ಮತ್ತೆ ಅನ್‍ಲಾಕ್ ಮಾರ್ಗಸೂಚಿ ಬದಲಾವಣೆ, ಸಂಜೆ 5ರವರೆಗೂ ಎಲ್ಲವೂ ಓಪನ್, ವೀಕೆಂಡ್ ಕರ್ಫ್ಯೂ ವೇಳೆ ಮಧ್ಯಾಹ್ನ 2ರವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ : ಡೀಸಿ ರಾಜೇಂದ್ರ ಆದೇಶ - Karavali Times

728x90

1 July 2021

ದಕ್ಷಿಣ ಕನ್ನಡ : ಮತ್ತೆ ಅನ್‍ಲಾಕ್ ಮಾರ್ಗಸೂಚಿ ಬದಲಾವಣೆ, ಸಂಜೆ 5ರವರೆಗೂ ಎಲ್ಲವೂ ಓಪನ್, ವೀಕೆಂಡ್ ಕರ್ಫ್ಯೂ ವೇಳೆ ಮಧ್ಯಾಹ್ನ 2ರವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ : ಡೀಸಿ ರಾಜೇಂದ್ರ ಆದೇಶ

ಮಂಗಳೂರು, ಜುಲೈ 02, 2022 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರದಿಂದ (ಜುಲೈ 02) ಅನ್ ಲಾಕ್ ಮಾರ್ಗಸೂಚಿಯಲ್ಲಿ ಮತ್ತೆ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಡಾ ರಾಜೇಂದ್ರ ಗುರುವಾರ ಆದೇಶ ಹೊರಡಿಸಿದ್ದಾರೆ. 

 ಶುಕ್ರವಾರದಿಂದ ಹೊಸ ಮಾರ್ಗಸೂಚಿಯಂತೆ ಜಿಲ್ಲೆಯಾದ್ಯಂತ ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ವ್ಯಾಪಾರ ವಹಿವಾಟಿಗೆ ಅನುಮತಿ ನೀಡಲಾಗಿದ್ದು, ಬಸ್ ಸಂಚಾರ ಸೇರಿದಂತೆ ಎಲ್ಲ ಚಟುವಟಿಕೆಗಳಿಗೂ ಅನುಮತಿ ನೀಡಲಾಗಿದೆ.

 ಜಿಲ್ಲೆಯಾದ್ಯಂತ ಶನಿವಾರ ಮತ್ತು ಭಾನುವಾರ ಎಂದಿನಂತೆ ವೀಕೆಂಡ್ ಕರ್ಫ್ಯೂ ಮುಂದುವರಿಯಲಿದೆಯಾದರೂ ಅದರಲ್ಲೂ ಬದಲಾವಣೆ ಇದೆ. ಹೊಸ ಮಾರ್ಗಸೂಚಿಯಂತೆ ವೀಕೆಂಡ್ ಕರ್ಫ್ಯೂ ಅವಧಿಯಲ್ಲಿ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಈ ಸಡಿಲಿಕೆ ಹಾಲು, ತರಕಾರಿ, ಮೀನು, ಮಾಂಸ ಮತ್ತು ದಿನಸಿ ಖರೀದಿಗಷ್ಟೇ ಸೀಮಿತವಾಗಿದ್ದು ಉಳಿದಂತೆ ಎಲ್ಲವೂ ಬಂದ್ ಆಗಲಿದೆ. ಬಸ್ ಸಂಚಾರಕ್ಕೂ ಅವಕಾಶ ಇಲ್ಲ. 

ಜುಲೈ 5ರವರೆಗೆ ಈ ಹೊಸ ಮಾರ್ಗಸೂಚಿ ಜಾರಿಯಲ್ಲಿ ಇರಲಿದ್ದು, ಬಳಿಕ ಪರಿಸ್ಥಿತಿ ನೋಡಿಕೊಂಡು ಮತ್ತೆ ಹೊಸ ಮಾರ್ಗಸೂಚಿ ಪ್ರಕಟಿಸಲಾಗುವುದು ಎಂದು ಡೀಸಿ ಡಾ ರಾಜೇಂದ್ರ ಸ್ಪಷ್ಟಪಡಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ದಕ್ಷಿಣ ಕನ್ನಡ : ಮತ್ತೆ ಅನ್‍ಲಾಕ್ ಮಾರ್ಗಸೂಚಿ ಬದಲಾವಣೆ, ಸಂಜೆ 5ರವರೆಗೂ ಎಲ್ಲವೂ ಓಪನ್, ವೀಕೆಂಡ್ ಕರ್ಫ್ಯೂ ವೇಳೆ ಮಧ್ಯಾಹ್ನ 2ರವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ : ಡೀಸಿ ರಾಜೇಂದ್ರ ಆದೇಶ Rating: 5 Reviewed By: karavali Times
Scroll to Top