ಬಂಟ್ವಾಳ, ಜುಲೈ 18, 2021 (ಕರಾವಳಿ ಟೈಮ್ಸ್) : ತಾಲೂಕಿನ ಪುದು ಗ್ರಾಮದ ಅಮ್ಮೆಮಾರು ಹಾಗೂ ಕುಮ್ಡೇಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜುಲೈ 19 ರಂದು ಸೋಮವಾರ (ನಾಳೆ) ಕೋವಿಶೀಲ್ಡ್ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 10 ಗಂಟೆಯಿಂದ 11 ಗಂಟೆಯವರೆಗೆ ಮೊದಲ ಡೋಸ್ ಪಡೆದು 84 ದಿನಗಳು ಕಳೆದವರು 2ನೇ ಡೋಸ್ ಪಡೆಯಲು ಮೊದಲ ಆದ್ಯತೆ ನೀಡಲಾಗುವುದು. ಬೆಳಿಗ್ಗೆ 11 ರಿಂದ 12 ಗಂಟೆವರೆಗೆ 45 ವರ್ಷ ಮೇಲ್ಪಟ್ಟವರಿಗೆ ಮೊದಲ ಡೋಸ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಬಳಿಕ ಲಸಿಕೆ ಲಭ್ಯವಿದ್ದಲ್ಲಿ ಮಧ್ಯಾಹ್ನ 12 ಗಂಟೆಯ ಬಳಿಕ 18 ವರ್ಷ ಮೇಲ್ಪಟ್ಟ ಆದ್ಯತಾ ವಲಯದವರಿಗೆ ಕಡ್ಡಾಯ ಅನೆಕ್ಷರ್-3 ಫಾರ್ಮ್ ನೊಂದಿಗೆ ನೀಡಲಾಗುವುದು.
ಇತ್ತೀಚೆಗೆ ನಡೆದ ಪುದು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಗ್ರಾಮಸ್ಥರು ಲಸಿಕೆಯನ್ನು ವಾರ್ಡ್‍ವಾರು ನೀಡುವಂತೆ ಆಗ್ರಹಿಸಿದ ಹಿನ್ನಲೆಯಲ್ಲಿ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರು ಈ ಬಗ್ಗೆ ಸ್ಥಳೀಯ ಶಾಸಕ ಯು ಟಿ ಖಾದರ್ ಅವರೊಂದಿಗೆ ಚರ್ಚಿಸಿ, ಶಾಸಕರು ತಾಲೂಕು ಆರೋಗ್ಯಾಧಿಕಾರಿಗೆ ಸೂಚಿಸಿದ ಹಿನ್ನಲೆಯಲ್ಲಿ ಪುದು ಗ್ರಾಮ ಪಂಚಾಯತಿನ ವಾರ್ಡ್‍ವಾರು ಲಸಿಕೆ ನೀಡುವ ಪ್ರಯುಕ್ತ ಇದೀಗ ಸೋಮವಾರ ಪಂಚಾಯತ್ ವ್ಯಾಪ್ತಿಯ ಎರಡು ವಾರ್ಡ್ ಗಳಾದ ಅಮೆಮಾರು ಹಾಗೂ ಕುಮ್ಡೇಲು ಪರಿಸರಲ್ಲಿ ಮೊದಲ ಬಾರಿಗೆ ಈ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಲಸಿಕೆ ಪಡೆಯಲು ಬಾಕಿ ಇರುವವರು ಈ ಲಸಿಕಾ ಕ್ಯಾಂಪಿನ ಸದುಪಯೋಗ ಪಡೆದುಕೊಳ್ಳುವಂತೆ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ತಿಳಿಸಿದ್ದಾರೆ.
0 comments:
Post a Comment