ಬೆಂಗಳೂರು, ಜುಲೈ 09, 2021 (ಕರಾವಳಿ ಟೈಮ್ಸ್) : ಸಿಇಟಿ-2021 ರ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಆನ್ ಲೈನ್ ಅರ್ಜಿ ಸಲ್ಲಿಸಲು ಇದ್ದ ಕೊನೆ ದಿನಾಂಕವನ್ನು ವಿದ್ಯಾರ್ಥಿಗಳು ಹಾಗೂ ಪೋಷಕರ ಕೋರಿಕೆಯ ಮೇರೆಗೆ ಜುಲೈ 16 ರವರೆಗೆ ವಿಸ್ತರಿಸಲಾಗಿದೆ. ಜುಲೈ 19ರವರೆಗೆ ಶುಲ್ಕ ಪಾವತಿ ಅವಧಿಯನ್ನು ವಿಸ್ತರಿಸಲಾಗಿದೆ.
ಅದೇ ರೀತಿ ಸಿಇಟಿ-2021 ರ ಅರ್ಜಿಯಲ್ಲಿ ಸಂಬಂಧಿಸಿದ ವಿಶೇಷ ವರ್ಗವನ್ನು (ಎನ್‍ಸಿಸಿ, ಸ್ಪೋಟ್ರ್ಸ್, ಎಕ್ಸ್-ಡಿಫೆನ್ಸ್, ಸ್ಕೌಟ್ಸ್ ಆಂಡ್ ಗೈಡ್ಸ್ ಇತ್ಯಾದಿ) ಕ್ಲೇಮ್ ಮಾಡಿರುವ ಅಭ್ಯರ್ಥಿಗಳು ವಿಶೇಷ ವರ್ಗದ ಪ್ರಮಾಣ ಪತ್ರಗಳನ್ನು ನಿಗದಿಪಡಿಸಿರುವ ಕೇಂದ್ರಗಳಲ್ಲಿ ತಮಗೆ ಹತ್ತಿರದ ಯಾವುದಾದರೂ ಒಂದು ಕೇಂದ್ರದಲ್ಲಿ ಕಚೇರಿ ವೇಳೆಯಲ್ಲಿ ಸಲ್ಲಿಸಲು ಸೂಚಿಸಲಾಗಿದೆ. ಕೇಂದ್ರಗಳ ವಿವರಗಳು ಹಾಗೂ ವೇಳಾಪಟ್ಟಿ ವಿವರವನ್ನು ಪರೀಕ್ಷಾ ಪ್ರಾಧಿಕಾರದ ವೈಬ್ ಸೈಟಿನಲ್ಲಿ ಪ್ರಕಟಿಸಲಾಗಿದ್ದು, ಆಯಾ ದಿನಾಂಕಗಳಂದು ಮಾತ್ರ ವಿಶೇಷ ವರ್ಗದ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
0 comments:
Post a Comment