ಬಂಟ್ವಾಳ, ಜುಲೈ 26, 2021 (ಕರಾವಳಿ ಟೈಮ್ಸ್ ) : ತಾಲೂಕಿನ ನಾವೂರು ಗ್ರಾಮದ ಬಡಗುಂಡಿ ಎಂಬಲ್ಲಿನ ಮನೆಯೊಂದರಲ್ಲಿ ಅಕ್ರಮವಾಗಿ ಹಣ ಪಣಕ್ಕಿಟ್ಟು ಉಲಾಯಿ ಪಿದಾಯಿ ಆಡುತ್ತಿರುವ ಬಗ್ಗೆ ದ್ದಾರೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ದೊರೆ ಖಚಿತ ಮಾಹಿತಿ ಮೇರೆಗೆ ಭಾನುವಾರ ದಾಳಿ ನಡೆಸಿದ ದಕ್ಷಿಣ ಕನ್ನಡ ಮಹಿಳಾ ಪೊಲೀಸ್ ಠಾಣಾ ಎಸ್ಸೈ ತಿಮ್ಮಪ್ಪ ನಾಯ್ಕ್ ನೇತೃತ್ವದ ಪೊಲೀಸರು ಆರೋಪಿಗಳಾದ ಕೃಷ್ಣ ಪೂಜಾರಿ, ರೋಹಿತಾಶ್ವ, ಗೋಪಾಲ, ಸತೀಶ ಮೂಲ್ಯ, ವಿಜಯ ಫೆರ್ನಾಂಡಿಸ್, ವಿಶ್ವಾಸ್ ಭಂಡಾರಿ, ಗಂಗಾಧರ ಪೂಜಾರಿ, ಕೃಷ್ಣಪ್ಪ, ಶಿವಪ್ರಸಾದ್, ಮೊಹಮ್ಮದ್ ಶರೀಫ್, ಮೊಹಮ್ಮದ್ ಅಶ್ರಫ್, ರಿಯಾಝ್ ಎಂಬವರನ್ನು ದಸ್ತಗಿರಿ ಮಾಡಿದ್ದಾರೆ.
ಬಂಧಿತ ಆರೋಪಿಗಳಿಂದ 45 ಸಾವಿರ ರೂಪಾಯಿ ನಗದು, ಅಂದಾಜು 40 ಸಾವಿರ ರೂಪಾಯಿ ಮೌಲ್ಯದ 12 ಮೊಬೈಲ್ ಫೋನ್ ಗಳು, ಸುಮಾರು 1.20 ಲಕ್ಷ ರೂಪಾಯಿ ಮೌಲ್ಯದ 4 ಬೈಕ್ ಗಳು, ಸುಮಾರು 50 ಸಾವಿರ ರೂಪಾಯಿ ಮೌಲ್ಯದ 1 ಓಮ್ನಿ ಕಾರು, ಸುಮಾರು 40 ಸಾವಿರ ರೂಪಾಯಿ ಮೌಲ್ಯದ 1 ಆಟೋ ರಿಕ್ಷಾಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ 83/2021 ಕಲಂ 78, 80 ಕರ್ನಾಟಕ ಪೊಲೀಸ್ ಕಾಯ್ದೆ 1963 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
0 comments:
Post a Comment