ಬಂಟ್ವಾಳ, ಜುಲೈ 10, 2021 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ತಾಲೂಕಿನ ಬಿ ಕಸ್ಬಾ ಗ್ರಾಮದ ಕಲ್ಲಗುಡ್ಡೆ ಎಂಬಲ್ಲಿ ಕಲ್ಲಗುಡ್ಡೆ ನಿವಾಸಿ ಸೋಮನಾಥ ಸಾಲಿಯಾನ್ ಬಿನ್ ಪರಮೇಶ್ವರ ಮೂಲ್ಯ ಅವರ ಮನೆಗೆ ಪಕ್ಕದ ಧರೆ ಕುಸಿದು ಬಿದ್ದ ಪರಿಣಾಮ ಮನೆಯ ಒಂದು ಪಾಶ್ರ್ವ ಸಂಪೂರ್ಣ ಹಾನಿಗೊಂಡಿದೆ.
ಸೋಮನಾಥ ಸಾಲ್ಯಾನ್ ಅವರ ಒಡೆತನದ ಈ ಮನೆಯಲ್ಲಿ ನವೀನ್ ಎಂಬವರು ಕುಟುಂಬ ಸಹಿತ ಬಾಡಿಗೆ ನೆಲೆಯಲ್ಲಿ ವಾಸವಾಗಿದ್ದರು. ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಪಕ್ಕದ ಧರೆ ಮನೆಯ ಪಾಶ್ರ್ವಕ್ಕೆ ಕುಸಿದು ಬಿದ್ದಿದೆ. ಘಟನೆಯಿಂದ ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಮನೆ ಹಾನಿಯಾಗಿದೆ. ಘಟನ ಸ್ಥಳಕ್ಕೆ ಬುಡಾ ಅಧ್ಯಕ್ಷರು, ಸ್ಥಳೀಯ ಪುರಸಭಾ ಸದಸ್ಯರು ಹಾಗೂ ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಷ್ಟದ ಅಂದಾಜು ನಡೆಸಿದ್ದಾರೆ.
0 comments:
Post a Comment