ಬಂಟ್ವಾಳ, ಜುಲೈ 26, 2021 (ಕರಾವಳಿ ಟೈಮ್ಸ್) : ಕಟ್ಪಡ ಕಾರ್ಮಿಕರಗೆ ಕೋವಿಡ್ 2ನೇ ಅಲೆಯ ಪರಿಹಾರ ಧನ 3 ಸಾವಿರ ರೂಪಾಯಿ ಮೊತ್ತ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಇದ್ದವರಿಗೆ ಈಗಾಗಲೇ ಡಿಬಿಟಿ ಮೂಲಕ ಫಲಾನುಭವಿಗಳ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗಿದೆ. ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಇಲ್ಲದವರಿಗೆ ಜಮೆಯಾಗಿಲ್ಲ. ಪರಿಹಾರ ಮೊತ್ತ ಲಭಿಸದ ಕಾರ್ಮಿಕರು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿ ಕಾರ್ಮಿಕ ಕಛೇರಿಗೆ ತಮ್ಮ ಬ್ಯಾಂಕ್ ಖಾತೆ ಪಾಸ್ ಪುಸ್ತಕದ ಪ್ರತಿ, ಆಧಾರ್ ಕಾರ್ಡ್ ಪ್ರತಿ, ಕಟ್ಟಡ ಕಾರ್ಮಿಕರ ನೋಂದಣಿ ಕಾರ್ಡ್ ಪ್ರತಿಗಳನ್ನು ಸಲ್ಲಿಸಲು ಸೂಚಿಸಲಾಗಿದೆ.
ಅಸಂಘಟಿತ ಕಾರ್ಮಿಕರ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಜುಲೈ 30 ಇದ್ದು, ಅರ್ಜಿ ಪರಿಶೀಲನೆ ಬಳಿಕ ಪರಿಹಾರ ಮೊತ್ತ ಜಮೆಯಾಗಲಿದೆ. ಅದೇ ರೀತಿ ಕಟ್ಟಡ ಕಾರ್ಮಿಕರ ಆಹಾರ ಕಿಟ್ ದೊರೆಯದವರು ಕಟ್ಪಡ ನೋಂದಣಿ ಕಾರ್ಡ್, ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆಗಳನ್ನು ಕಾರ್ಮಿಕ ಕಚೇರಿಗೆ ಸಲ್ಲಿಸಲು ಸೂಚಿಸಲಾಗಿದೆ. ಈ ಬಗ್ಗೆ ಇಲಾಖೆಯ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಕಳುಹಿಸಿ ಸೂಕ್ತ ಕ್ರಮಕ್ಕಾಗಿ ಕೋರಲಾಗುವುದು ಎಂದು ಬಂಟ್ವಾಳ ಕಾರ್ಮಿಕ ಇಲಾಖಾ ನಿರೀಕ್ಷಕಿ ಮರ್ಲಿನ್ ಗ್ರೇಸಿ ಡಿ’ಸೋಜ ತಿಳಿಸಿದ್ದಾರೆ.
0 comments:
Post a Comment