ಬೆಂಗಳೂರು, ಜುಲೈ 17, 2021 (ಕರಾವಳಿ ಟೈಮ್ಸ್) : ಬಕ್ರೀದ್ ಹಬ್ಬದ ಪ್ರಯುಕ್ತ ರಾಜ್ಯ ಸರಕಾರದ ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವ ಹಿನ್ನಲೆಯಲ್ಲಿ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಶುಕ್ರವಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿತ್ತು. ಸದ್ರಿ ಆದೇಶದಂತೆ ಮಸೀದಿಗಳಲ್ಲಿ ಒಂದು ಬಾರಿ 50 ಮಂದಿ ಮಾತ್ರ ಪ್ರಾರ್ಥನೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ನಮೂದಿಸಲಾಗಿತ್ತು.
ಆದರೆ ಶನಿವಾರ ಈ ಆದೇಶದಲ್ಲಿ ತಿದ್ದುಪಡಿ ಮಾಡಿದ ವಕ್ಫ್ ಇಲಾಖೆ ಮಸೀದಿಗಳಲ್ಲಿ 50 ಮಂದಿಗೆ ನಮಾಝಿಗೆ ಅವಕಾಶ ಎಂದಿರುವುದನ್ನು ಮಸೀದಿಗಳ ಸಾಮಥ್ರ್ಯದ 50% ಮಂದಿ ನಮಾಝಿನಲ್ಲಿ ಭಾಗವಹಿಸಬಹುದು ಎಂದು ಓದಿಕೊಳ್ಳುವಂತೆ ಆದೇಶದಲ್ಲಿ ತಿದ್ದುಪಡಿ ಮಾಡಿ ಮರು ಸೂಚನೆ ಜಾರಿಗೊಳಿಸಿದೆ. ಉಳಿದಂತೆ ಎಲ್ಲ ನಿದೇಶನಗಳು ಯಥಾಸ್ಥಿತಿ ಪಾಲಿಸುವಂತೆ ಸೂಚಿಸಿದೆ.
0 comments:
Post a Comment