ಬಂಟ್ವಾಳ, ಜುಲೈ 08, 2021 (ಕರಾವಳಿ ಟೈಮ್ಸ್) : ತಾಲೂಕಿನ ಅಮ್ಟಾಡಿ ಗ್ರಾಮದ ಕೆಂಪುಗುಡ್ಡೆ ತಿರುವಿನಲ್ಲಿ ಗುರುವಾರ ಹಿಟಾಚಿ ಸಾಗಿಸುತ್ತಿದ್ದ ಟಿಪ್ಪರ್ ಚಾಲಕನ ನಿಯಂತ್ರಣ ಮೀರಿ ಇಲ್ಲಿನ ನಿವಾಸಿ ನಾರಾಯಣ ಭಂಡಾರಿ ಅವರ ಮನೆ ಮೇಲೆ ಉರುಳಿ ಬಿದ್ದ ಪರಿಣಾಮ ಟಿಪ್ಪರಿನಲ್ಲಿದ್ದ ವಿಠಲ ಅವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಪಘಾತದಿಂದ ಟಿಪ್ಪರಿನ ಅಡಿಗೆ ಸಿಲುಕಿದ ವಿಠಲ ಅವರು ಗಾಯಗೊಂಡಿದ್ದು, ನಾರಾಯಣ ಭಂಡಾರಿ ಅವರ ಮನೆ ಜಖಂಗೊಂಡಿದೆ. ಉಳಿದಂತೆ ಮನೆ ಮಂದಿ ಯಾವುದೇ ಅಪಾಯವಿಲ್ಲದೆ ಅದೃಷ್ಟವಶಾತ್ ಪಾರಾಗಿದ್ದಾರೆ. ಕ್ರೇನ್ ಬಳಸಿ ಟಿಪ್ಪರನ್ನು ಮೇಲಕ್ಕೆತ್ತಲಾಗಿದೆ.
0 comments:
Post a Comment