ಬಂಟ್ವಾಳ, ಜುಲೈ 28, 2021 (ಕರಾವಳಿ ಟೈಮ್ಸ್) : ಹುಟ್ಟು ಆಕಸ್ಮಿಕ, ಸಾವು ಖಚಿತ ಈ ಮಧ್ಯೆ ಮೂರು ದಿನದ ಜೀವನದಲ್ಲಿ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಂತಹ ದೀನ ದಲಿತರ ಸಂಕಷ್ಟಕ್ಕೆ ಆಸರೆಯಾಗಿದ್ದ ಮರ್‍ಹೂಂ ಅಮೀರ್ ಅಹ್ಮದ್ ತುಂಬೆ ಅವರ ಆಕಸ್ಮಿಕ ಹಾಗೂ ಅಕಾಲಿಕ ನಿಧನ ಸಮಾಜಕ್ಕೆ ತುಂಬಲಾರದ ನಷ್ಟವಾಗಿದ್ದು, ಅಲ್ಲಾಹನು ಅವರ ಪಾರತ್ರಿಕ ಜೀವನ ಯಶಸ್ವಿಗೊಳಿಸಲಿ ಎಂದು ಜಿ ಪಂ ಮಾಜಿ ಸದಸ್ಯ, ಕೆಪಿಸಿಸಿ ಸಂಯೋಜಕ ಉಮರ್ ಫಾರೂಕ್ ಪರಂಗಿಪೇಟೆ ಪ್ರಾರ್ಥಿಸಿದರು.
ಪುದು ವಲಯ ಕಾಂಗ್ರೆಸ್ ಸಮಿತಿ ಹಾಗೂ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಇತ್ತೀಚೆಗೆ ನಿಧನರಾದ ರಾಜ್ಯ ಇಂಟಕ್ ಉಪಾಧ್ಯಕ್ಷರಾಗಿದ್ದ ಡಾ ಅಮೀರ್ ತುಂಬೆ ಅವರಿಗೆ ಫರಂಗಿಪೇಟೆ ವಿಶ್ವಾಸ್ ಸಿಟಿ ಸೆಂಟರ್ ಕಾಂಪ್ಲೆಕ್ಸ್‍ನಲ್ಲಿ ಬುಧವಾರ ನಡೆದ ಸಂತಾಪ ಸೂಚಕ ಸಭೆಯಲ್ಲಿ ಭಾಗವಹಿಸಿ ನುಡಿನಮನ ಸಲ್ಲಿಸಿದ ಅವರು ಅತ್ಯಂತ ಕ್ಷಣಿಕವಾದ ಬದುಕಿನಲ್ಲಿ ಮರ್‍ಹೂಂ ಅಮೀರ್ ತುಂಬೆ ಅವರು ಕೈಗೊಂಡ ಬಡವರ-ದೀನ ದಲಿತರ ಪರ ಬಗೆಗಿನ ಕಾರುಣ್ಯ ಸೇವೆ ಎಂದೆಂದಿಗೂ ಶಾಶ್ವತವಾಗುವುದರ ಜೊತೆಗೆ ಪಾರತ್ರಿಕ ಮೋಕ್ಷಕ್ಕೂ ಕಾರಣ ಎಂದರು.
ಪುದು ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಫೀಕ್ ಪೆರಿಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪುದು ಗ್ರಾ ಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಉಪಾಧ್ಯಕ್ಷೆ, ಲಿಡಿಯಾ ಪಿಂಟೋ, ಸದಸ್ಯರುಗಳಾದ ಭಾಸ್ಕರ ರೈ, ಹುಸೇನ್ ಪಾಡಿ, ಕಿಶೋರ್, ಹಿರಿಯ ಕಾಂಗ್ರೆಸ್ಸಿಗರಾದ ಎಫ್ ಎ ಖಾದರ್, ಅಮ್ಮೆಮಾರ್ ಜುಮಾ ಮಸೀದಿ ಅಧ್ಯಕ್ಷ ಉಮರಬ್ಬ, ನುಡಿ ನಮನ ಸಲ್ಲಿಸಿದರು.
ಮುಡಿಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಇಂತಿಯಾಝ್ ತುಂಬೆ, ಮುಡಿಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ನವಾಝ್ ನರಿಂಗಾನ, ಉಪಾಧ್ಯಕ್ಷ ಮಜೀದ್ ಪೇರಿಮಾರ್, ಪುದು ವಲಯ ಯುವ ಕಾಂಗ್ರೆಸ್ ಅಧ್ಯಕ್ಷ ನಿಝಾಂ ಕುಂಜತ್ಕಲ, ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಹಕೀಂ ಮಾರಿಪಳ್ಳ, ಪಂಚಾಯತ್ ಸದಸ್ಯರುಗಳಾದ ಇಕ್ಬಾಲ್ ಸುಜೀರ್, ಲವೀನಾ, ಝಹೀರ್, ರಿಯಾಝ್, ಫೈಝಲ್ ಅಮ್ಮೆಮಾರ್, ಮುಹಮ್ಮದ್ ಮೋನು, ರಝಾಕ್ ಅಮ್ಮೆಮಾರ್, ರಶೀದಾ ಬಾನು, ಝೀನತ್, ರಝಿಯಾ, ಮಾಜಿ ಅಧ್ಯಕ್ಷೆ ಆತಿಕಾ ಅಮ್ಮೆಮಾರ್, ಮಾಜಿ ಸದಸ್ಯರುಗಳಾದ ಎಸ್ ಹಸನಬ್ಬ, ಎಂ ಕೆ ಖಾದರ್, ಪ್ರಮುಖರಾದ ಹಿಶಾಂ ಫರಂಗಿಪೇಟೆ, ಗಫೂರ್ ಫರಂಗಿಪೇಟೆ, ಸಲೀಂ ಫರಂಗಿಪೇಟೆ, ಬಾಪಿ ಪರಂಗಿಪೇಟೆ, ಇನ್ಶಾದ್ ಮಾರಿಪಳ್ಳ, ಬಶೀರ್ ತಂಡೆಲ್, ಸದಾಶಿವ ಕುಮ್ದೇಲ್, ಸಲಾಂ ಮಲ್ಲಿ, ಸಮೀಝ್ ಫರಂಗಿಪೇಟೆ ಮೊದಲಾದವರು ಸಂತಾಪ ಸಭೆಯಲ್ಲಿ ಭಾಗವಹಿಸಿದ್ದರು.
0 comments:
Post a Comment