ಬಂಟ್ವಾಳ, ಜುಲೈ 08, 2021 (ಕರಾವಳಿ ಟೈಮ್ಸ್) : ಬಂಟ್ವಾಳ, ಜುಲೈ 08, 2021 (ಕರಾವಳಿ ಟೈಮ್ಸ್) : ತಾಲೂಕಿನ ಪ್ರತಿಷ್ಠಿತ ಸೇವಾ ಸಂಸ್ಥೆಯಾಗಿರುವ ರೋಟರಿ ಕ್ಲಬ್ ಬಂಟ್ವಾಳದ 2021-22 ನೇ ಸಾಲಿನ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜುಲೈ 9 ರ ಶುಕ್ರವಾರ ಸಂಜೆ (ನಾಳೆ) ಬಿ ಸಿ ರೋಡಿನ ರೋಟರಿ ಭವನದ ಬಿ ಎ ಸೋಮಯಾಜಿ ಮೆಮೋರಿಯಲ್ ಸಭಾಂಗಣದಲ್ಲಿ ನಡೆಯಲಿದೆ ಎಂದು ನೂತನ ಅಧ್ಯಕ್ಷ ಮಹಮ್ಮದ್ ವಳವೂರು ತಿಳಿಸಿದರು.
ಗುರುವಾರ ಸಂಜೆ ಬಿ ಸಿ ರೋಡಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಪೂರ್ವ ಜಿಲ್ಲಾ ಗವರ್ನರ್ ಡಾ ನಾಗಾರ್ಜುನ್ ಅವರು ಪದಗ್ರಹಣ ನೆರವೇರಿಸುವರು. ಜಿಲ್ಲೆ 3181 ವಲಯ 4 ರ ಸಹಾಯಕ ಗವರ್ನರ್ ರೊ ಪಿ ಎಚ್ ಎಫ್ ಸುರೇಂದ್ರ ಕಿಣಿ, ಜಿಲ್ಲೆ 3181ರ ವಲಯ ಸೇನಾನಿ ರೋ ಪಿಎಚ್‍ಎಫ್ ಅವಿಲ್ ಮಿನೇಜಸ್ ಭಾಗವಹಿಸುವರು ಎಂದವರು ಹೇಳಿದರು.
ಸಕರಾತ್ಮಕ ಆರೋಗ್ಯ (ಪಾಸಿಟಿವ್ ಹೆಲ್ತ್), ಪರಿಸರ ಸಂರಕ್ಷಣೆ, ಪ್ರಥಮ ಚಿಕಿತ್ಸೆ ತರಬೇತಿ, ಸಂಚಾರಿ ನಿಯಮಗಳ ಜಾಗೃತಿ, ಕಲಿಕೆ ಈ ವರ್ಷದ ಜಿಲ್ಲಾ ಕಾರ್ಯಕ್ರಮಗಳಾಗಿದ್ದು ರೋಟರಿ ಜಿಲ್ಲಾ ಗವರ್ನರ್ ರವೀಂದ್ರ ಭಟ್ ಹಾಗೂ ಸಹಾಯಕ ಗವರ್ನರ್ ಸುರೇಂದ್ರ ಕಣಿ ಅವರ ಮಾರ್ಗದರ್ಶನದಂತೆ ಕ್ಲಬ್ಬಿನ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಈ ವರ್ಷವನ್ನು ಯಶಸ್ವಿಯಾಗಿ ನಿರ್ವಹಿಸಲಿದ್ದೇವೆ ಎಂದು ಮಹಮ್ಮದ್ ವಳವೂರು ತಿಳಿಸಿದರು. ಕೋವಿಡ್ ಹಿನ್ನಲೆಯಲ್ಲಿ ಸರಕಾರದ ಮಾರ್ಗಸೂಚಿಯನುಸಾರ ಪದಗ್ರಹಣ ಸಮಾರಂಭವನ್ನು ಸರಳವಾಗಿ ನಡೆಯಲಿದೆ ಎಂದವರು ತಿಳಿಸಿದರು.
ನೂತನ ಕಾರ್ಯದರ್ಶಿ ಧನಂಜಯ ಬಾಳಿಗ, ಕೋಶಾಧಿಕಾರಿ ಬೇಬಿ ಕುಂದರ್, ಸದಸ್ಯರಾದ ರಿತೇಶ್ ಬಾಳಿಗ, ಡಾ ಸಂದೇಶ್ ಶೆಟ್ಟಿ, ಪ್ರಭಾಕರ ಪ್ರಭು ಜೊತೆಗಿದ್ದರು.
0 comments:
Post a Comment