ಸಿಇಟಿ ವಿದ್ಯಾರ್ಥಿಗಳಿಗೆ ಅವಧಿ ವಿಸ್ತರಣೆ : ತಿದ್ದುಪಡಿಗೆ ಆಗಸ್ಟ್ 2 ರಿಂದ 5ರವರೆಗೆ ಹಾಗೂ ವಿಶೇಷ ವರ್ಗ ದಾಖಲಾತಿ ಸಲ್ಲಿಸಲು ಆಗಸ್ಟ್ 3 ರಿಂದ 6ರವರೆಗೆ ಅವಕಾಶ - Karavali Times ಸಿಇಟಿ ವಿದ್ಯಾರ್ಥಿಗಳಿಗೆ ಅವಧಿ ವಿಸ್ತರಣೆ : ತಿದ್ದುಪಡಿಗೆ ಆಗಸ್ಟ್ 2 ರಿಂದ 5ರವರೆಗೆ ಹಾಗೂ ವಿಶೇಷ ವರ್ಗ ದಾಖಲಾತಿ ಸಲ್ಲಿಸಲು ಆಗಸ್ಟ್ 3 ರಿಂದ 6ರವರೆಗೆ ಅವಕಾಶ - Karavali Times

728x90

28 July 2021

ಸಿಇಟಿ ವಿದ್ಯಾರ್ಥಿಗಳಿಗೆ ಅವಧಿ ವಿಸ್ತರಣೆ : ತಿದ್ದುಪಡಿಗೆ ಆಗಸ್ಟ್ 2 ರಿಂದ 5ರವರೆಗೆ ಹಾಗೂ ವಿಶೇಷ ವರ್ಗ ದಾಖಲಾತಿ ಸಲ್ಲಿಸಲು ಆಗಸ್ಟ್ 3 ರಿಂದ 6ರವರೆಗೆ ಅವಕಾಶ

ಬೆಂಗಳೂರು, ಜುಲೈ 28, 2021 (ಕರಾವಳಿ ಟೈಮ್ಸ್) : ಯುಜಿಸಿಇಟಿ-2021 ಪರೀಕ್ಷೆಗೆ ಆನ್ ಲೈನ್ ಅರ್ಜಿಯಲ್ಲಿ ತಪ್ಪಾಗಿ ನಮೂದಿಸಿದ ಮಾಹಿತಿಗಳನ್ನು ತಿದ್ದುಪಡಿ ಮಾಡಲು ಆಗಸ್ಟ್ 2 ರಿಂದ 5ರವರೆಗೆ ಅವಕಾಶ ಕಲ್ಪಿಸಲಾಗಿದ್ದು, ಪರೀಕ್ಷಾ ಸ್ಥಳ ಹೊರತುಪಡಿಸಿ ಉಳಿದಂತೆ ವಿದ್ಯಾರ್ಥಿಗಳು ತಪ್ಪಾಗಿ ನಮೂದಿಸಿದ ಮಾಹಿತಿಗಳನ್ನು ಸರಿಪಡಿಸಬಹುದು. 

ಅದೇ ರೀತಿ ವಿಶೇಷ ಪ್ರವರ್ಗದಡಿ ದಾಖಲಾತಿ ಸಲ್ಲಿಸದೆ ಇರುವ ವಿದ್ಯಾರ್ಥಿಗಳು ಆಗಸ್ಟ್ 3 ರಿಂದ 6ರವರೆಗೆ ಕೆಇಎ ಬೆಂಗಳೂರು ಕಚೇರಿಯಲ್ಲಿ ತಮ್ಮ ವಿಶೇಷ ಪ್ರವರ್ಗದ ಮೂಲ ದಾಖಲೆಗಳನ್ನು ಸಲ್ಲಿಸಬಹುದು ಎಂದು ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಸಿಇಟಿ ವಿದ್ಯಾರ್ಥಿಗಳಿಗೆ ಅವಧಿ ವಿಸ್ತರಣೆ : ತಿದ್ದುಪಡಿಗೆ ಆಗಸ್ಟ್ 2 ರಿಂದ 5ರವರೆಗೆ ಹಾಗೂ ವಿಶೇಷ ವರ್ಗ ದಾಖಲಾತಿ ಸಲ್ಲಿಸಲು ಆಗಸ್ಟ್ 3 ರಿಂದ 6ರವರೆಗೆ ಅವಕಾಶ Rating: 5 Reviewed By: karavali Times
Scroll to Top