ಬೆಂಗಳೂರು, ಜುಲೈ 14, 2021 (ಕರಾವಳಿ ಟೈಮ್ಸ್) : ಕೊರೋನಾ ವೈರಸ್ ಕಾರಣದಿಂದ 2021-22ನೇ ಸಾಲಿನ ಪಿಯುಸಿ ಶೈಕ್ಷಣಿಕ ವರ್ಷದ ಭೌತಿಕ ತರಗತಿಗಳು ಪ್ರಾರಂಭಗೊಳ್ಳದ ಹಿನ್ನಲೆಯಲ್ಲಿ ಜುಲೈ 15 ರಿಂದ ಆನ್ ಲೈನ್ ತರಗತಿಗಳನ್ನು ಆರಂಭಿಸಲು ಪಿಯು ಬೋರ್ಡ್ ಆದೇಶ ಹೊರಡಿಸಿದೆ. ಆ ಪ್ರಕಾರ ನಾಳೆಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಪಠ್ಯ ಬೋಧನೆ ಪ್ರಾರಂಭವಾಗಲಿದ್ದು, ಉಪನ್ಯಾಸಕರು ಆನ್ ಲೈನ್ ಮೂಲಕ ಪಠ್ಯ ಬೋಧನೆ ಮಾಡುವಂತೆ ಸೂಚನೆ ನೀಡಲಾಗಿದೆ.
ಕಾಲೇಜಿನ ಉಪನ್ಯಾಸಕರೇ ವಿದ್ಯಾರ್ಥಿಗಳಿಗೆ ಎಂಎಸ್ ಟೀಂ, ಗೂಗಲ್ ಮೀಟ್ ಝೂಂ ಒS ಖಿeಚಿm, ಉoogಟe meeಣ, Zoom ಅಥವಾ ಜಿಯೋ ಮೀಟ್ ಮೂಲಕ ಪಠ್ಯ ಬೋಧನೆ ಮಾಡುವಂತೆ ಸೂಚಿಸಲಾಗಿದೆ. ಎಲ್ಲಾ ಉಪನ್ಯಾಸಕರು ಕಡ್ಡಾಯವಾಗಿ ಪಠ್ಯ ಬೋಧನೆ ಮಾಡಬೇಕು. ವಿದ್ಯಾರ್ಥಿಗಳ ಹಾಜರಾತಿ ಪಡೆದು ಪ್ರಾಂಶುಪಾಲರಿಗೆ ವರದಿ ನೀಡಬೇಕು. ಕಾಲೇಜಿನಲ್ಲಿ ಉಪನ್ಯಾಸಕರು ಇಲ್ಲದೆ ಹೋದ್ರೆ ಪಕ್ಕದ ಕಾಲೇಜಿನ ಉಪನ್ಯಾಸಕರು ಸಮಯ ಹೊಂದಿಸಿಕೊಂಡು ತಲಾ 20 ಮಕ್ಕಳ ತಂಡದಂತೆ ಪಠ್ಯ ಬೋಧನೆ ಮಾಡಬೇಕು. ಈ ಬಗ್ಗೆ ಜಿಲ್ಲಾ ಉಪನಿರ್ದೇಶಕರು ಅಗತ್ಯ ಕ್ರಮವಹಿಸಲು ಸೂಚಿಸಲಾಗಿದೆ.
ಪ್ರತಿ ದಿನ 4 ಅವಧಿಯಲ್ಲಿ ಪಠ್ಯ ಬೋಧನೆಗೆ ಪಿಯುಸಿ ಬೋರ್ಡ್ ವೇಳಾಪಟ್ಟಿ ನಿಗದಿಪಡಿಸಿದ್ದು. ಬೆಳಿಗ್ಗೆ 10 ರಿಂದ 11 ರವರೆಗೆ ಮೊದಲ ಅವಧಿ, ಎರಡನೇ ಅವಧಿ 11 ರಿಂದ 12 ಗಂಟೆ, 12 ರಿಂದ 12.30ವರೆಗೆ ವಿರಾಮ, ಮಧ್ಯಾಹ್ನ 12.30 ರಿಂದ 1.30ರವರೆಗೆ 3ನೇ ಅವಧಿ ಹಾಗೂ 1.30 ರಿಂದ 2.30ರವರೆಗೆ 4ನೇ ಅವಧಿ ಇರುವುದಾಗಿ ವೇಳಾಪಟ್ಟಿ ನಿಗದಿಪಡಿಸಲಾಗಿದೆ.
0 comments:
Post a Comment