ನವದೆಹಲಿ, ಜುಲೈ 30, 2021 (ಕರಾವಳಿ ಟೈಮ್ಸ್) : ಕೋವಿಡ್ 2ನೇ ಅಲೆ ಕಾರಣಕ್ಕಾಗಿ ರದ್ದುಗೊಳಿಸಲಾಗಿದ್ದ ಸಿಬಿಎಸ್‍ಇ 12ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, ಶೇ.99.37 ವಿದ್ಯಾರ್ಥಿಗಳು ಅಂದರೆ 12.96 ಲಕ್ಷ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
10 ಹಾಗೂ 11ನೇ ತರಗತಿಯ ಅಂತಿಮ ಪರೀಕ್ಷೆಯ ಫಲಿತಾಂಶ ಹಾಗೂ 12ನೇ ತರಗತಿಯ ಪ್ರಿ-ಬೋರ್ಡ್ ಪರೀಕ್ಷೆಗಳ ಅಂಕ ಅಧರಿಸಿ ಈ ಫಲಿತಾಂಶ ಪ್ರಕಟಿಸಲಾಗಿದೆ. ಸಿಬಿಎಸ್‍ಇ ಅಧಿಕೃತ ವೆಬ್‍ಸೈಟ್ cbseresults.nic.in ಅಥವಾ cbse.gov.in ಗೆ ಭೇಟಿ ನೀಡಿ ವಿದ್ಯಾರ್ಥಿಗಳು ಫಲಿತಾಂಶ ವೀಕ್ಷಿಸಬಹುದು.
ಈ ಬಾರಿ 30:30:40 ಸೂತ್ರದಡಿ ಫಲಿತಾಂಶ ತಯಾರಿಸಲಾಗಿದ್ದು, 10, 11ನೇ ತರಗತಿ ಅಂತಿಮ ಪರೀಕ್ಷೆ ಅಂಕ ಹಾಗೂ 12ನೇ ತರಗತಿಯಲ್ಲಿ ನಡೆಸಲಾಗಿರುವ ಪೂರ್ವ ಸಿದ್ಧತಾ ಪರೀಕ್ಷೆಗಳ ಅಂಕ ಆಧರಿಸಿ 30:30:40 ಅನುಪಾತ ನಿಯಮದಡಿ ಇದೀಗ ಫಲಿತಾಂಶ ಪ್ರಕಟಿಸಲಾಗಿದೆ.
0 comments:
Post a Comment