ಬಂಟ್ವಾಳ, ಜೂನ್ 05, 2021 (ಕರಾವಳಿ ಟೈಮ್ಸ್) : ವಿಶ್ವ ಪರಿಸರ ದಿನದ ಅಂಗವಾಗಿ ಯು ಟಿ ಕೆ ಹೆಲ್ಪ್ ಲೈನ್ 24*7, ಹಾಗೂ ಪುದು ಯುವ ಕಾಂಗ್ರೆಸ್, ಪುದು ವಲಯ ಕಾಂಗ್ರೆಸ್ ವತಿಯಿಂದ ಸುಜೀರ್ ಶಾಲಾ ವಠಾರದಲ್ಲಿ ಗಿಡಗಳನ್ನು ನೆಟ್ಟು ಪರಿಸರ ದಿನ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಜಿ ಪಂ ಮಾಜಿ ಸದಸ್ಯ ಉಮ್ಮರ್ ಫಾರೂಕ್ ಫರಂಗಿಪೇಟೆ ಅವರು, ಪರಿಸರವು ಪ್ರತಿ ಜೀವರಾಶಿಗೂ ಅತ್ಯಂತ ಅತ್ಯಾವಶ್ಯಕ ವಸ್ತುವಾಗಿದೆ. ಗಾಳಿ, ನೀರು, ಮರ, ಕಾಡು, ಸಾಗರ, ಮಣ್ಣು ಇತ್ಯಾದಿ ಪರಿಸರ ಸಂಬಂಧಿ ವಸ್ತುಗಳು ಉಳಿದಾಗ ಮಾತ್ರ ಮಾನವ ರಾಶಿಗೆ ನೆಮ್ಮದಿಯ ವಾತಾವರಣ ಉಂಟಾಗಲು ಸಾಧ್ಯ. ಈ ನಿಟ್ಟಿನಲ್ಲಿ ನಮ್ಮ ಪರಿಸರದಲ್ಲಿ ಮರ-ಗಿಡಗಳನ್ನು ನೆಟ್ಟು, ಪೋಷಿಸಿ ಬೆಳೆಸಿ ಪರಿಸರಕ್ಕೆ ಅರ್ಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಈ ಸಂದರ್ಭ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಉಪಾಧ್ಯಕ್ಷೆ ಲೀಡಿಯಾ ಪಿಂಟೋ, ಸದಸ್ಯರಾದ ಇಕ್ಬಾಲ್ ಸುಜೀರ್, ಕಿಶೋರ್ ಸುಜೀರ್, ಮಹಮ್ಮದ್ ಮೋನು, ರಝಾಕ್ ಅಮೆಮಾರ್, ಮುಡಿಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಇಂತಿಯಾಝ್ ತುಂಬೆ, ಪುದು ವಲಯ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಪೇರಿಮಾರ್, ಮುಡಿಪು ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮಜೀದ್ ಪೇರಿಮಾರ್, ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಮುಖಂಡ ಹಿಶಾಂ ಫರಂಗಿಪೇಟೆ, ಪುದು ಯುವ ಕಾಂಗ್ರೆಸ್ ಅಧ್ಯಕ್ಷ ನಿಝಾಂ ಕುಂಜತ್ತಕಲ್, ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಉಸ್ತುವಾರಿ ಸಮೀಝ್ ಫರಂಗಿಪೇಟೆ, ಪುದು ಯುವ ಕಾಂಗ್ರೆಸ್ ಸದಸ್ಯ ಇನ್ಷದ್ ಮಾರಿಪಳ್ಳ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment