ಬಂಟ್ವಾಳ, ಜೂನ್ 18, 2021 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಮಳೆ ಮುಂದುವರಿದಿದ್ದು, ಮಳೆ ಹಾನಿ ಪ್ರಕರಣಗಳೂ ಸಾಕಷ್ಟು ಪ್ರಮಾಣದಲ್ಲಿ ದಾಖಲಾಗಿದೆ. ಬುಧವಾರದಿಂದ ಗುರುವಾರ ಬೆಳಿಗ್ಗಿನವರೆಗೆ ತಾಲೂಕಿನಲ್ಲಿ 45.7 ಮಿಮೀ ಮಳೆಯಾಗಿದ್ದು, ನೇತ್ರಾವತಿ ನದಿ ನೀರಿನ ಮಟ್ಟ ಶುಕ್ರವಾರ ಬೆಳಿಗ್ಗೆ 5.5ರಲ್ಲಿತ್ತು.
ಸಜಿಪನಡು ಗ್ರಾಮದ ಇಸ್ಮಾಯಿಲ್ ಅವರ ಮನೆಗೆ ಮರ ಬಿದ್ದು ಹಾನಿ ಸಂಭವಿಸಿದರೆ, ಇಡ್ಕಿದು ಗ್ರಾಮದ ವಡ್ಯರ್ಪೆ ನಿವಾಸಿ ಇಸ್ಮಾಯಿಲ್ ಬಿನ್ ಅಬ್ಬು ಬ್ಯಾರಿ ಅವರ ಮನೆ ಗಾಳಿಗೆ ಹಾನಿಯಾಗಿದೆ. ಪೆರಾಜೆ ಗ್ರಾಮದ ವಿಶ್ವನಾಥ ಮೂಲ್ಯ ಬಿನ್ ಉಗ್ಗಪ್ಪ ಮೂಲ್ಯ ಅವರ ಹಳೆಯ ವಾಸ್ತವ್ಯ ಇಲ್ಲದ ಮನೆ ಪೂತಿ ಕುಸಿದು ಬಿದ್ದಿದೆ.
ಗೂಡಿನಬಳಿ ನಿವಾಸಿ ಐಸಮ್ಮ ಕೋಂ ಅಬ್ದುಲ್ ಹಮೀದ್ ಅವರ ವಾಸದ ಮನೆಗೆ ಹಾನಿಯಾಗಿದೆ. ಸಜಿಪನಡು ಗ್ರಾಮದ ಉಮಾವತಿ ಕೋಂ ರುಕ್ಮಯ ಅವರ ವಾಸದ ಮನೆಯ ಮೇಲ್ಛಾವಣಿಗೆ ಹಾನಿಯಾಗಿದೆ. ಇರಾ ಗ್ರಾಮದ ಕಾಪಿಕಾಡು ಅಂಗನವಾಡಿ ಕೇಂದ್ರದ ಮಾಡು ಬಿದ್ದು ಕಟ್ಟಡಕ್ಕೆ ಹಾನಿಯಾಗಿರುತ್ತದೆ ಎಂದು ತಾಲೂಕು ಕಛೇರಿ ಮಾಹಿತಿ ತಿಳಿಸಿದೆ.
0 comments:
Post a Comment