ವಿಟ್ಲ ಕಸಬಾ ಗ್ರಾಮದಲ್ಲಿ ಬರೆ ಜರಿದು ಮನೆಯ ಬಚ್ಚಲು ಮನೆಗೆ ಭಾಗಶಃ ಹಾನಿಯಾಗಿ ನಷ್ಟ ಸಂಭವಿಸಿದೆ.
ಅನಂತಾಡಿ ಗ್ರಾಮದ ಪೊಯ್ಯೆ ಮನೆ ನಿವಾಸಿ ಮಹಾಬಲ ಮಡಿವಾಳ ಬಿನ್ ಶಿವಪ್ಪ ಮಡಿವಾಳ ಅವರ ತೋಟದಲ್ಲಿ ಗಾಳಿ ಮಳೆಯಿಂದಾಗಿ ಅಡಿಕೆ ಮರಗಳು ಮುರಿದು ಬಿದ್ದು ಹಾನಿಯಾಗಿರುತ್ತದೆ.
ಸಜಿಪಮುನ್ನೂರು ಗ್ರಾಮದ ಮಲಾಯಿಬೆಟ್ಟು ನಿವಾಸಿ ಅಬ್ದುಲ್ ಹಮೀದ್ ಬಿನ್ ಹಾಮದ್ ಬ್ಯಾರಿ ಅವರ ಮನೆಗೆ ಹಾನಿ ಸಂಭವಿಸಿದೆ.
ತೆಂಕಕಜೆಕಾರು ಗ್ರಾಮದ ಕುರುವರಗೊಳಿ ನಿವಾಸಿ ವೀರಪ್ಪ ಪೂಜಾರಿ ಬಿನ್ ಚೆನ್ನಯ್ಯ ಪೂಜಾರಿ ಅವರ ಕಚ್ಚಾ ಮನೆಯ ಹಿಂಬಾಗದ ತಡೆಗೋಡೆ ಮಳೆಗೆ ಮಣ್ಣು ಕುಸಿತದಿಂದಾಗಿ ತಡೆಗೋಡೆ ಅಡಿಪಾಯ ಕುಸಿದು ಕಚ್ಚಾ ಮನೆಯ ಮೇಲೆ ಬಿದ್ದು, ಮನೆಯ ಹಿಂಭಾಗ ಸಂಪೂರ್ಣ ಹಾನಿಯಾಗಿದೆ. ವೀರಪ್ಪ ಪೂಜಾರಿಯವರನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ತಾಲೂಕಾಡಳಿತದ ಮಾಹಿತಿ ತಿಳಿಸಿದೆ.
0 comments:
Post a Comment