ಬಂಟ್ವಾಳ, ಜೂನ್ 02, 2021 (ಕರಾವಳಿ ಟೈಮ್ಸ್) : ತಾಲೂಕಿನ ವಿಟ್ಲ ಸಮೀಪದ ಪುಣಚ ಗ್ರಾಮದ ಕೊಪ್ಪಳ ನಿವಾಸಿ, ಪಾಲಿಟೆಕ್ನಿಕ್ ನಿವೃತ್ತ ಪ್ರೊಫೆಸರ್ ಭುಜಂಗ ಶೆಟ್ಟಿ (85) ಕೋವಿಡ್ ಸೋಂಕು ಬಾಧಿಸಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದು, ಮೃತ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದ ಪುತ್ರ ಶೈಲೇಶ್ ಶೆಟ್ಟಿ (44) ಅವರು ಹೃದಯಘಾತದಿಂದ ಕುಸಿದು ಬಿದ್ದು ಮೃತಪಟ್ಟ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.
ಕೋವಿಡ್ ಪಾಸಿಟಿವ್ ಕಾರಣದಿಂದ ಮಂಗಳವಾರ ಮೃತಪಟ್ಟಿದ್ದ ಭುಜಂಗ ಶೆಟ್ಟಿ ಅವರ ಅಂತಿಮ ಸಂಸ್ಕಾರ ಬುಧವಾರ ಬೈಲುಗುತ್ತು ಕೊಪ್ಪಳ ಅವರ ನಿವಾಸದಲ್ಲಿ ಕೋವಿಡ್ ನಿಯಮಾವಳಿಯೊಂದಿಗೆ ನಡೆಸಲಾಯಿತು. ಈ ವೇಳೆ ಅಂತ್ಯ ಕ್ರಿಯೆಯಲ್ಲಿ ಭಾಗಿಯಾಗಿದ್ದ ಭುಜಂಗ ಶೆಟ್ಟಿಯವರ ಕಿರಿಯ ಪುತ್ರ ಆಸ್ಟ್ರೇಲಿಯಾದಲ್ಲಿ ಉದ್ಯೋಗಿಯಾಗಿರುವ ಶೈಲೇಶ್ ಅವರು ಏಕಾಏಕಿ ಕುಸಿದು ಬಿದ್ದಿದ್ದು ಅವರನ್ನು ತಕ್ಷಣ ಪುತ್ತೂರಿನ ಆಸ್ಪತ್ರೆಗೆ ಸಾಗಿಸಲಾಯುತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತ ಶೈಲೇಶ್ ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಡಿಪ್ಲೋಮಾ ಇನ್ ಮೆಕಾನಿಕಲ್ ಇಂಜಿನಿಯರ್ ಆಗಿರುವ ಶೈಲೇಶ್ ಶೆಟ್ಟಿ ಕಳೆದ ಕೆಲ ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ಉನ್ನತ ಉದ್ಯೋಗದಲ್ಲಿದ್ದರು. ಕಳೆದ ಎರಡು ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
0 comments:
Post a Comment