ವಿಜಯಪುರ, ಜೂನ್ 04, 2021 (ಕರಾವಳಿ ಟೈಮ್ಸ್) : ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಗಬೇನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗಬೇನಾಳ, ವೀರೇಶನಗರ ಮತ್ತು ಆರೇಶಂಕರ ಗ್ರಾಮದಲ್ಲಿ ಇಲ್ಲಿನ ವೀರೇಂದ್ರ ಸೆಹ್ವಾಗ್ ಗ್ರಾಮೀಣಾಭಿವೃದ್ಧಿ ಯುವಶಕ್ತಿ ಸಂಘ ವತಿಯಿಂದ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಲಾಯಿತು.
ಈ ಸಂದರ್ಭ ಮಾತನಾಡಿದ ಸಂಘದ ಅಧ್ಯಕ್ಷ ಜಗದೀಶ ಪತ್ತಾರ ಅವರು, ಸರಕಾರದ ಮಾರ್ಗಸೂಚಿಯನ್ನು ಎಲ್ಲರೂ ಪಾಲಿಸಿ, ಯಾರು ಅನಗತ್ಯವಾಗೊ ಹೊರಗಡೆ ತಿರುಗಾಟ ಮಾಡದಿರಿ. ಅಗತ್ಯ ವಸ್ತುಗಳನ್ನು ತರಲು ಹೊರಗಡೆ ಹೋಗುವಾಗ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸಿ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸಲಹೆ ನೀಡಿದರು.
ಈ ಈ ಸಂದರ್ಭ ಸಂಘದ ಪದಾಧಿಕಾರಿಗಳಾದ ಮೆಹಬೂಬ್ ಹೀರೇಮನಿ ಹಾಗೂ ಭೀಮನಗೌಡ ಪಾಟೀಲ, ಮಾನಪ್ಪ ನಾಗಬೇನಾಳ, ಹಣಮಂತ ಗೌಂಡಿ, ಶೇಖಸಾಬ್ ನದಾಪ್ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment