ಬೆಂಗಳೂರು, ಜೂನ್ 15, 2021 (ಕರಾವಳಿ ಟೈಮ್ಸ್) : ಬೆಂಗಳೂರು ಛೇಂಬರ್ ಆಫ್ ಕಾಮರ್ಸ್ ಮುಂದಾಳತ್ವದಲ್ಲಿ ವಿವಿಧ ಕಂಪನಿಗಳು ತಮ್ಮ ಸಿಎಸ್ಆರ್ ಅನುದಾನದ ಅಡಿಯಲ್ಲಿ ನೀಡುತ್ತಿರುವ ಎಲ್ಪಿಜಿ ಬಳಸಿ ಶವದಹನ ಮಾಡುವ 2 ಚಿತಾಗಾರಗಳು, ದೇಹವನ್ನು ಕಾಪಿಡುವ 5 ಶೈತ್ಯಾಗಾರಗಳು, ಐಟಿಐ ಕೋವಿಡ್ ಆಸ್ಪತ್ರೆಗೆ 10 ಆಕ್ಸಿಜನ್ ಕಾನ್ಸನ್ಟ್ರೇಟರ್ ಮತ್ತು ಜಿಗಣಿ ಸರಕಾರಿ ಆಸ್ಪತ್ರೆಗೆ ಆಮ್ಲಜನಕ ಉತ್ಪಾದನಾ ಘಟಕವನ್ನು ಮಂಗಳವಾರ ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ಬಿಬಿಎಂಪಿ ಅಧಿಕಾರಿಗಳಿಗೆ ಹಸ್ತಾಂತರಿಸಿದರು.
ಈ ಸಂಧರ್ಭ ಬಿಸಿಐಸಿ ಅಧ್ಯಕ್ಷ ಪರುಶುರಾಮನ್, ಉಪಾಧ್ಯಕ್ಷರಾದ ಡಾ. ಎಲ್ ರವೀಂದ್ರನ್, ಕೆ ಆರ್ ಶೇಖರ್, ಟಯೋಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ನ ಜನರಲ್ ಮ್ಯಾನೇಜರ್ ನಾಗರಾಜ್, ಟಿಐಇಐ ವೈಸ್ ಪ್ರೆಸಿಡೆಂಟ್ ಅಮಿತ್ ಜೈನ್, ನಿರ್ದೇಶಕ ಪರಮೇಶ್ವರನ್, ಬಿಸಿಐಸಿ ಮಾಜಿ ಅಧ್ಯಕ್ಷೆ ಇಂದಿರಾ ಪ್ರೇಮ್ ಮೆನನ್, ನಿವೃತ್ತ ಐಎಎಸ್ ಅಧಿಕಾರಿ ವಿದ್ಯಾಶಂಕರ್ ಉಪಸ್ಥಿತರಿದ್ದರು.
0 comments:
Post a Comment