ಮಂಗಳೂರು, ಜೂನ್ 19, 2021 (ಕರಾವಳಿ ಟೈಮ್ಸ್) : ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಕಟೀಲು ದೇವಸ್ಥಾನ, ಕಿನ್ನಿಗೋಳಿ ಮೊದಲಾದೆಡೆಗಳಿಗೆ ಸಂಪರ್ಕ ಕಲ್ಪಿಸುವ ಮರವೂರು ಸೇತುವೆ ಕುಸಿತಗೊಂಡು ಸಂಚಾರ ನಿರ್ಬಂಧಿಸಲಾಗಿರು ಹಿನ್ನಲೆಯಲ್ಲಿ ಬದಲಿ ಸಂಚಾರಕ್ಕಾಗಿ ನೀಡಿದ ಕಾವೂರು-ಕೂಳೂರು-ಕೆಬಿಎಸ್-ಜೋಕಟ್ಟೆ-ಪೊರ್ಕೋಡಿ-ಬಜ್ಪೆ ಅಥವಾ ಪಚ್ಚನಾಡಿ-ಗುರುಪುರ-ಕೈಕಂಬ-ಬಜ್ಪೆ ರಸ್ಥೆಯು ತೀರಾ ಕಿರಿದಾಗಿರುತ್ತದೆ. ಅಲ್ಲದೆ ಜೋಕಟ್ಟೆಯಲ್ಲಿ ರೈಲ್ವೇ ಗೇಟ್ ಕೂಡಾ ದಾಟ ಬೇಕಾಗಿರುವುದರಿಂದ ವಿಪರೀತ ಟ್ರಾಫಿಕ್ ಜಂಜಾಟ ಉಂಟಾಗಿ ಜನ ಕಷ್ಟ ಅನುಭವಿಸುತ್ತಿದ್ದಾರೆ.
ಈ ಕಾರಣಕ್ಕಾಗಿ ಪರ್ಯಾಯ ಸಂಚಾರಕ್ಕಾಗಿ (MSEZ) ಕೂಳೂರು-ಕಳವಾರು-ಬಜಪೆ ರಸ್ತೆ ಸಾರ್ವಜನಿಕರಿಗೆ ಮುಕ್ತಗೊಳಿಸುವಂತೆ ಮಾಜಿ ಸಚಿವ, ಮಂಗಳೂರು ಶಾಸಕ ಯು.ಟಿ. ಖಾದರ್ ಹಾಗೂ ಮಾಜಿ ಸಚಿವ ಅಭಯಚಂದ್ರ ಜೈನ್ ಅವರು ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ಅವರಿಗೆ ಸಲಹೆ ನೀಡಿದರು.
ಅದೇ ರೀತಿ ಆದಷ್ಟು ಬೇಗನೇ ಮರವೂರು ಸೇತುವೆಯ ದುರಸ್ಥಿ ಕಾಮಗಾರಿಯನ್ನು ಕೈಗೆತ್ತಿಕೊಂಡು ಮತ್ತೆ ಮರವೂರು ಸೇತುವೆ ಸಾರ್ವಜನಿಕರ ಉಪಯೋಗಕ್ಕೆ ಮುಕ್ತವಾಗುವಂತೆ ಕ್ರಮ ಕೈಗೊಳ್ಳುವಂತೆಯೂ ಇದೇ ವೇಳೆ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
0 comments:
Post a Comment