ಬೆಂಗಳೂರು, ಜೂನ್ 09, 2021 (ಕರಾವಳಿ ಟೈಮ್ಸ್) : ಕೆನರಾ ಬ್ಯಾಂಕಿನೊಂದಿಗೆ ಕಳೆದ ವರ್ಷ ವಿಲೀನಗೊಂಡಿರುವ ಸಿಂಡಿಕೇಟ್ ಬ್ಯಾಂಕಿನ ಐ ಎಫ್ ಎಸ್ ಸಿ ಕೋಡ್ ಜುಲೈ 1 ರಿಂದ ಬದಲಾಗಲಿದೆ ಎಂದು ಬ್ಯಾಂಕ್ ತನ್ನ ಗ್ರಾಹಕರಿಗೆ ತಿಳಿಸಿದೆ. ಬ್ಯಾಂಕ್ ಶಾಖೆಗಳ ಬದಲಾದ ಹೊಸ ಕೋಡ್ ಬಗ್ಗೆ ಬ್ಯಾಂಕಿನ ಅಧಿಕೃತ ವೆಬ್ ತಾಣದಲ್ಲಿ ಅಥವಾ ಶಾಖೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು ಎಂದಿರುವ ಕೆನರಾ ಬ್ಯಾಂಕ್ ಈಗಾಗಲೇ ಬದಲಾದ ಕೋಡ್ ತಿಳಿದುಕೊಳ್ಳುವ ಬಗ್ಗೆ ಗ್ರಾಹಕರ ಮೊಬೈಲ್ ಗಳಿಗೆ ಸುಲಭ ಲಿಂಕ್ ಕೂಡಾ ಕಳಿಸಿಕೊಡಲಾಗಿದೆ ಎಂದು ಹೇಳಿದೆ.
ಕೆನರಾ ಬ್ಯಾಂಕ್ ಜೊತೆ ವಿಲೀನಗೊಂಡಿರುವ ಸಿಂಡಿಕೇಟ್ ಬ್ಯಾಂಕ್ ಗ್ರಾಹಕರು ಮುಖ್ಯವಾಗಿ ಇಂಡಿಯ ಫೈನಾನ್ಶಿಯಲ್ ಸಿಸ್ಟಮ್ ಕೋಡ್(IFSC), swift ಕೋಡ್, ಚೆಕ್ ಬುಕ್ ಬಗ್ಗೆ ಗಮನ ಹರಿಸಿ, ಬದಲಾವಣೆ ಬಗ್ಗೆ ತಿಳಿದುಕೊಂಡು ವ್ಯವಹರಿಸಲು ಸೂಚಿಸಲಾಗಿದೆ. ಜುಲೈ 1 ರಿಂದ ಹಳೆ ಚೆಕ್ ಬುಕ್, ಐ ಎಫ್ ಎಸ್ ಸಿ ಕೋಡ್ ಇದೆಲ್ಲವೂ ಅಮಾನ್ಯಗೊಳ್ಳಲಿದ್ದು, ಹೊಸ ವಿಧಾನ ಮಾತ್ರ ಕಾರ್ಯನಿರ್ವಹಿಸಲಿದೆ ಎಂದು ಬ್ಯಾಂಕ್ ಸೂಚನೆ ತಿಳಿಸಿದೆ.
ವಿಲೀನದ ಬಳಿಕ ಸಿಂಡಿಕೇಟ್ ಬ್ಯಾಂಕ್ IFSC ಕೋಡ್ (SYNB) ಮುಂದಿನ ದಿನಗಳಲ್ಲಿ ಕೆನರಾ ಬ್ಯಾಂಕಿನ CNRB ಆಗಿ ಬದಲಾಗಲಿದೆ. NEFT/RTGS/IMPS ಮೂಲಕ ವ್ಯವಹರಿಸುವಾಗ ಗ್ರಾಹಕರು ಈ ಹೊಸ ವಿಧಾನ ಅನುಸರಿಸುವಂತೆ ಬ್ಯಾಂಕ್ ತನ್ನ ಗ್ರಾಹಕರಿಗೆ ಸೂಚಿಸಿದೆ.
0 comments:
Post a Comment