ಬಂಟ್ವಾಳ, ಜೂನ್ 17, 2021 (ಕರಾವಳಿ ಟೈಮ್ಸ್) : ಪುದು ಗ್ರಾ ಪಂ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರು ಆಯಾ ಗ್ರಾಮದಲ್ಲಿ ಕೋವಿಡ್ ಲಸಿಕೆ ನೀಡಲು ಕ್ರಮ ಕೈಗೊಳ್ಳುವಂತೆ ಕ್ಷೇತ್ರದ ಶಾಸಕ ಯು ಟಿ ಖಾದರ್ ಅವರಿಗೆ ಮಾಡಿಕೊಂಡ ಮನವಿಯಂತೆ ಶಾಸಕರು ಸೂಕ್ತ ಸಮಯದಲ್ಲಿ ಸ್ಪಂದಿಸಿದ್ದು, ಪುದು ಗ್ರಾಮದ ಸುಜೀರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಪುದು ಗ್ರಾಮದ 45 ವರ್ಷ ಮೇಲ್ಪಟ್ಟ ಗ್ರಾಮಸ್ಥರಿಗೆ ಕೋವಿಶೀಲ್ಡ್ ಲಸಿಕಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಪುದು ಗ್ರಾ ಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಉಪಾಧ್ಯಕ್ಷೆ ಲೀಡಿಯಾ ಪಿಂಟೋ, ಸದಸ್ಯರುಗಳಾದ ಹುಸೈನ್ ಪಾಡಿ, ಇಕ್ಬಾಲ್ ಸುಜೀರ್, ಕಿಶೋರ್ ಸುಜೀರ್, ಝಾಹಿರ್ ಕುಂಪಣಮಜಲು, ಸಂತೋಷ್ ನೆತ್ತರಕರೆ, ರಝಾಕ್ ಅಮ್ಮೆಮಾರ್, ಆತಿಕಾ ಅಮ್ಮೆಮಾರ್, ನಝೀರ್ ಕುಂಜತ್ಕಲ, ಆಶಾ ನಯನಾ, ಪಿಡಿಒ ಹರೀಶ್ ಕೆ, ಸಿಂಬದಿಗಳಾದ ಮುಹಮ್ಮದ್ ಕೈಸ್, ಮುಹಮ್ಮದ್ ಶರೀಪ್ , ರೋಹಿನಿ, ಪ್ರೀಯ, ಡಾ ಸುದರ್ಶನ್, ಶಾಲಾ ಎಸ್ ಡಿ ಎಂ ಸಿ ಸದಸ್ಯರುಗಳಾದ ಬಿ ಮುಹಮ್ಮದ್ ತುಂಬೆ, ರಫೀಕ್ ಪೇರಿಮಾರ್ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment