ಮಂಗಳೂರು, ಜೂನ್ 18, 2021 (ಕರಾವಳಿ ಟೈಮ್ಸ್) : ಜೂನ್ 21 ರಂದು ಆಚರಿಸಲ್ಪಡುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಭಾರತೀಯ ಅಂಚೆ ಇಲಾಖೆಯು ವಿಶೇಷ ಅಂಚೆ ಮೊಹರು ಬಳಸುತ್ತಿದೆ. ಮಂಗಳೂರು ಪ್ರಧಾನ ಅಂಚೆ ಕಚೇರಿ ಹಾಗೂ ಕುಲಶೇಖರ ಪ್ರಧಾನ ಅಂಚೆ ಕಚೇರಿಗಳಲ್ಲಿ ಜೂನ್ 21 ರಂದು ಸ್ವೀಕೃತವಾಗುವ ಹಾಗೂ ಬಡವಾಡೆಯಾಗುವ ಎಲ್ಲಾ ಅಂಚೆ ಪತ್ರಗಳಿಗೆ ಈ ವಿಶೇಷ ಅಂಚೆ ಮೊಹರಿನ ಮುದ್ರೆ ಒತ್ತಲಾಗುವುದು. ಆಸಕ್ತರು ಈ ಎರಡು ಅಂಚೆ ಕಛೇರಿಗಳನ್ನು ಸಂಪರ್ಕಿಸಬಹುದು ಎಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಧೀಕ್ಷಕರ ಕಛೇರಿ ಪ್ರಕಟಣೆ ತಿಳಿಸಿದೆ.
18 June 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment