ಬಂಟ್ವಾಳ, ಜೂನ್ 19, 2021 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಶುಕ್ರವಾರ-ಶನಿವಾರವೂ ಮಳೆ ಮುಂದುವರಿದಿದ್ದು, ಮಳೆ ಹಾನಿ ಪ್ರಕರಣಗಳೂ ಹೆಚ್ಚಳಗೊಳ್ಳುತ್ತಿದೆ.
ಬಿಳಿಯೂರು ಗ್ರಾಮದ ಕುಂಬ್ರಗೆ ನಿವಾಸಿ ಶಿವಪ್ಪ ದೇವಾಡಿಗರ ವಾಸದ ಮನೆಗೆ ಮರ ಬಿದ್ದು ಭಾಗಶಃ ಹಾನಿ ಸಂಭವಿಸಿದೆ. ವಿಟ್ಲ ಕಸಬಾ ಗ್ರಾಮದ ಕಲ್ಯಾಣಿ ಅವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಕರ್ಪೆ ಗ್ರಾಮದ ತಾಜಂಗುರಿ ನಿವಾಸಿ ರಾಜೀವಿ ಕೋಂ ಕೃಷ್ಣ ಪೂಜಾರಿ ಅವರ ಮನೆಯ ಮುಂದಿನ ಭಾಗ ಮಳೆಗೆ ಹಾನಿಯಾಗಿರುತ್ತದೆ. ಇಡ್ಕಿದು ಗ್ರಾಮದ ಕೋಲ್ಪೆ ನಿವಾಸಿ ಕೃಷ್ಣ ಕುಮಾರ್ ಬಿನ್ ನಾರಾಯಣ ಭಟ್ ಅವರ ಅಂಗಡಿ ಕಟ್ಟಡದ ಮೇಲೆ ಮರ ಬಿದ್ದು ಭಾಗಶಃ ಹಾನಿ ಸಂಭವಿಸಿದೆ. ಇಡ್ಕಿದು ಗ್ರಾಮದ ಮಿತ್ತೂರು ಬೀಡಿನಮಜಲು ನಿವಾಸಿ ವಲೇರಿಯನ್ ಡಿ’ಸೋಜ ಬಿನ್ ಸಿಪ್ರಿಯನ್ ಡಿ’ಸೋಜ ಅವರ ತೋಟದಲ್ಲಿ ಅಡಿಕೆ, ಬಾಳೆ ಹಾಗೂ ತೆಂಗಿನ ಮರಗಳಿಗೆ ಸಿಡಿಲು ಬಡಿದು ನಷ್ಟ ಸಂಭವಿಸಿದೆ ಎಂದು ತಾಲೂಕು ಕಛೇರಿ ಮಾಹಿತಿ ತಿಳಿಸಿದೆ.
0 comments:
Post a Comment