ಬಂಟ್ವಾಳ, ಜೂನ್ 17, 2021 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಮಂಗಳವಾರ ಹಾಗೂ ಬುಧವಾರ ಮಳೆ ಅಬ್ಬರ ಕಡಿಮೆಯಾಗಿದ್ದರೂ ವಿವಿಧೆಡೆ ಮಳೆ ಹಾನಿ ಪ್ರಕರಣಗಳು ಮುಂದುವರಿದಿದೆ.
ತಾಲೂಕಿನ ಜೀವ ನದಿ ನೇತ್ರಾವತಿ ಗುರುವಾರ ಬೆಳಿಗ್ಗೆ 5.8 ಮೀಟರ್ ಎತ್ತರದಲ್ಲಿ ಹರಿಯುತ್ತಿದೆ. ತಗ್ಗು ಪ್ರದೇಶದ ಜನರಿಗೆ ಈಗಾಗಲೇ ತಾಲೂಕಾಡಳಿತ ಹಾಗೂ ಪುರಸಭಾಡಳಿತ ಎಚ್ಚರಿಕೆ ನೀಡಿದ್ದು, ಕಟ್ಟೆಚ್ಚರ ವಹಿಸುವಂತೆ ಸೂಚಿಸಿದೆ. ಬುಧವಾರದಿಂದ ಗುರುವಾರ ಬೆಳಗ್ಗಿನವರೆಗೆ ತಾಲೂಕಿನಲ್ಲಿ 36.9 ಮಿ ಮೀ ಮಳೆಯಾದ ಬಗ್ಗೆ ತಾಲೂಕಾಡಳಿತ ಮಾಹಿತಿ ನೀಡಿದೆ. ಈಗಾಗಲೇ ಶಂಭೂರು ಎಎಂಆರ್ ಹಾಗೂ ತುಂಬೆ ಅಣೆಕಟ್ಟುಗಳಿಂದ ಹೆಚ್ಚುವರಿ ನೀರನ್ನು ಹಂತ ಹಂತವಾಗಿ ಹೊರಕ್ಕೆ ಬಿಡುವ ಬಗ್ಗೆ ಅಣೆಕಟ್ಟು ಅಧಿಕಾರಿಗಳೂ ನದೀ ತೀರದ ಜನರಿಗೆ ಸೂಚನೆ ನೀಡಿದ್ದು, ಜನ ಹಾಗೂ ಸಾಕು ಪ್ರಾಣಿಗಳ ಬಗ್ಗೆ ತೀವ್ರ ನಿಗಾ ವಹಿಸುವಂತೆ ಸೂಚಿಸಿದ್ದಾರೆ.
ಅನಂತಾಡಿ ಗ್ರಾಮದ ಲೋಕನಾಥ ಬಿನ್ ನೇಮು ಪೂಜಾರಿ ಅವರ ಮನೆಗೆ ತಾಗಿರುವ ಹಟ್ಟಿಗೆ ಮರ ಬಿದ್ದು ಹಾನಿ ಸಂಭವಿಸಿದೆ. ಮಂಚಿ ಗ್ರಾಮದ ಕಾಡಂಗಡಿ ಎಂಬಲ್ಲಿ ಭಾಗೀರಥಿ ಕೋಂ ವಾಮನ ಪೂಜಾರಿ ಅವರ ಮನೆ ಹಿಂದಿನ ಗೋಡೆ ಪೂರ್ತಿ ಕುಸಿದಿರುತ್ತದೆ.
ನರಿಂಗಾನ ಗ್ರಾಮದ ಮೋರ್ಲ ಹಿತ್ತಿಲು ಎಂಬಲ್ಲಿ ಅಲಿಮಮ್ಮ ಅವರ ವಾಸ್ತವ್ಯದ ಮನೆಗೆ ಭಾಗಶಃ ಹಾನಿ ಸಂಭವಿಸಿರುತ್ತದೆ. ಮಂಚಿ ಗ್ರಾಮದ ಗಣಪತಿ ಅವರ ಮನೆಯ ತಡಗೋಡೆ ಕುಸಿದು ಬಿದ್ದು ಹಾನಿ ಸಂಭವಿಸಿದೆ. ಸಂಗಬೆಟ್ಟು ಗ್ರಾಮದ ಪಲ್ಲೆದಕಾಡು ಎಂಬಲ್ಲಿ ಅಬ್ದುಲ್ ಹಮೀದ್ ಬಿನ್ ಅಹ್ಮದ್ ಬ್ಯಾರಿ ಅವರ ಮನೆಗೆ ಅಡಿಕೆ ಮರ ಬಿದ್ದು ಹಾನಿ ಸಂಭವಿಸಿದೆ.
ಗಿÉಂಕಕಜೆಕಾರು ಗ್ರಾಮದ ಮಿತ್ತಳಿಕೆ ನಿವಾಸಿ ಇಬ್ರಾಯಿ ಬ್ಯಾರಿ ಬಿನ್ ಇಸುಬು ಬ್ಯಾರಿ ಅವರ ಮನೆಗೆ ಹಿಂಭಾಗದ ಗೋಡೆ ಕುಸಿದು ಬಿದ್ದಿದ್ದು ಮೇಲ್ಛಾವಣಿ ಸಂಪೂರ್ಣ ಹಾನಿಯಾಗಿದೆ.
ಶಂಭೂರು ಗ್ರಾಮದ ಸುಜಾತ ಕೋಂ ಸತೀಶ್ ಅವರ ವಾಸದ ಮನೆಗೆ ಹೊಂದಿಕೊಂಡಿರುವ ಕೊಟ್ಟಿಗೆಗೆ ಮರ ಬಿದ್ದು ಹಾನಿಯಾಗಿರುತ್ತದೆ. ಪುಣಚ ಗ್ರಾಮದ ನಡುಸಾರು ಎಂಬಲ್ಲಿ ಪುಟ್ಟ ನಾಯ್ಕ ಬಿನ್ ಬಟ್ಯ ನಾಯ್ಕ ಎಂಬವರ ವಾಸದ ಮನೆಗೆ ತಾಗಿಕೊಂಡಿರುವ ಶೌಚಾಲಯಕ್ಕೆ ಮರದ ಕೊಂಬೆ ಬಿದ್ದು ಭಾಗಶಃ ಹಾನಿಯಾಗಿರುತ್ತದೆ.
ಮಣಿನಾಲ್ಕೂರು ಗ್ರಾಮದ ಆಚಾರಿಬೆಟ್ಟು ನಿವಾಸಿ ಜನಾರ್ದನ ಬಿನ್ ಗುರುವ ಅವರ ಮನೆಗೆ ಮರ ಬಿದ್ದು ತೀವ್ರ ಹಾನಿ ಆಗಿರುತ್ತದೆ. ಪಿಲಿಮೊಗರು ಗ್ರಾಮದ ಕೆಸೊಟ್ಟು ಕೇಶವ ಭಟ್ ಅವರ ಅಡಿಕೆ ತೋಟಕ್ಕೆ ಹಾನಿಯಾಗಿದೆ. ಕೊಳ್ನಾಡು ಗ್ರಾಮದ ಪಟ್ಲಕೋಡಿ ನಿವಾಸಿ ರಘುನಾಥ ನಾಯ್ಕ್ ಬಿನ್ ಅಣ್ಣು ನಾಯ್ಕ ಅವರ ಮನೆಯ ಮೇಲ್ಛಾವಣಿ ಸಂಪೂರ್ಣ ಕುಸಿದು ಬಿದ್ದಿರುತ್ತದೆ ಎಂದು ತಾಲೂಕು ಕಛೇರಿ ಪ್ರಾಕೃತಿಕ ವಿಕೋಪ ವಿಷಯ ನಿರ್ವಾಹಕ ವಿಶು ಕುಮಾರ್ ತಿಳಿಸಿದ್ದಾರೆ.
0 comments:
Post a Comment