ಬಂಟ್ವಾಳ, ಜೂನ್ 15, 2021 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಸೋಮವಾರ ಹಾಗೂ ಮಂಗಳವಾರ ಕೂಡಾ ಭಾರೀ ಮಳೆ ಮುಂದುವರಿದಿದ್ದು, ವಿವಿಧೆಡೆ ಮಳೆ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿದೆ.
ಪೆರಾಜೆ ಗ್ರಾಮದ ಅಬ್ದುಲ್ ಹಕೀಂ ಬಿನ್ ಹಸನ್ ಕುಂಞÂ ಅವರ ಕಂಪೌಂಡಿಗೆ ಹಾನಿಯಾಗಿದೆ, ಅದೇ ಗ್ರಾಮದ ಬುಡೋಳಿ ನಿವಾಸಿಗಳಾದ ಅವ್ವಮ್ಮ ಕೋಂ ಅದ್ರಾಮ ಹಾಗೂ ನೆಬಿಸಾ ಕೋಂ ಮೊಹಮ್ಮದ್ ಬಶೀರ್ ಅವರ ಮನೆಯೊಳಗೆ ಗುಡ್ಡೆಯ ನೀರು ತುಂಬಿ ಹಾನಿ ಸಂಭವಿಸಿದೆ. ಸದ್ರಿ ಮನೆಗಳಿಗೆ ಪೆರಾಜೆ ಗ್ರಾಮದ ಉಮ್ಮರ್ ಪೆರಾಜೆ ಅವರ ಗುಡ್ಡೆಯ ನೀರು ಹರಿದು ಬಂದಿದ್ದು, ಇದನ್ನು ನಿಯಂತ್ರಿಸಲು ಜೆಸಿಬಿ ಬಳಸಿ ಕಾಮಗಾರಿ ನಡೆಸಲಾಗಿದೆ.
ಅಮ್ಟಾಡಿ ಗ್ರಾಮದ ಲೋಕನಾಥ ಬಿನ್ ನೇಮು ಪೂಜಾರಿ ಅವರ ಮನೆಗೆ ತಾಗಿಕೊಂಡಿರುವ ಹಟ್ಟಿಗೆ ಮರ ಬಿದ್ದು ಹಾನಿಯಾಗಿದೆ. ಶಂಭೂರು ಗ್ರಾಮದ ರಾಧಾ ಕೋಂ ನಾಗರಾಜ್ ಅವರ ವಾಸ್ತವ್ಯದ ಮನೆಗೆ ಹಾನಿಯಾಗಿದೆ.
ಪಂಜಿಕಲ್ಲು ಗ್ರಾಮದ ಪಾಂಗಾಳ ಅಣ್ಣು ಸಾಲಿಯಾನ್ ಬಿನ್ ಬಾಬು ಪೂಜಾರಿ ಅವರ ಅಡಿಕೆ ತೋಟ ಗಾಳಿಗೆ ತುತ್ತಾಗಿ ಸುಮಾರು 20 ಫಲ ಬರುವ ಅಡಿಕೆ ಮರಗಳು ಧರೆಗುಳಿದಿವೆ ಎಂದು ತಾಲೂಕು ಕಛೇರಿ ಪ್ರಾಕೃತಿಕ ವಿಕೋಪ ವಿಷಯ ನಿರ್ವಾಹಕ ವಿಶು ಕುಮಾರ್ ತಿಳಿಸಿದ್ದಾರೆ.
0 comments:
Post a Comment