ಬಂಟ್ವಾಳ, ಜೂನ್ 06, 2021 (ಕರಾವಳಿ ಟೈಮ್ಸ್) : ಯು ಟಿ ಕೆ ಕೋವಿಡ್-19 ಹೆಲ್ಪ್ ಲೈನ್ 24x7 ಹಾಗೂ ಪುದು ಯುವ ಕಾಂಗ್ರೆಸ್ ವತಿಯಿಂದ ಪುದು ಗ್ರಾಮದ ಕುಂಜತ್ಕಲ ವ್ಯಾಪ್ತಿಯಲ್ಲಿ ಸ್ವಚ್ಛತೆಯನ್ನು ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಹಾಗೂ ಜಿ ಪಂ ಮಾಜಿ ಸದಸ್ಯ ಉಮರ್ ಫಾರೂಕ್ ಅವರ ನೇತೃತ್ವದಲ್ಲಿ ಭಾನುವಾರ ನಡೆಸಲಾಯಿತು. ಅಲ್ಲದೆ ಮುಂದಿನ ಪ್ರತಿ ಭಾನುವಾರ ಕೂಡಾ ಪಂಚಾಯತ್ ವ್ಯಾಪ್ತಿಯ ವಿವಿಧ ಪರಿಸರಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸುವುದಾಗಿ ಇದೇ ವೇಳೆ ಅಧ್ಯಕ್ಷ ರಮ್ಲಾನ್ ತಿಳಿಸಿದ್ದಾರೆ.
ಈ ಸಂದರ್ಭ ಪಂಚಾಯತ್ ಉಪಾಧ್ಯಕ್ಷೆ ಲೀಡಿಯ ಪಿಂಟೋ, ಸದಸ್ಯರಾದ ಇಕ್ಬಾಲ್ ಸುಜೀರ್, ಕಿಶೋರ್ ಸುಜೀರ್, ಮಹಮ್ಮದ್ ಮೋನು , ಭಾಸ್ಕರ್ ರೈ, ರಝಾಕ್ ಅಮೆಮಾರ್, ಝಹೀರ್ ಕುಂಪನಮಜಲ್, ಮಾಜಿ ಸದಸ್ಯ ಇಸ್ಮಾಯಿಲ್ ಕುಂಜತ್ಕಲ, ಪುದು ವಲಯ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಪೇರಿಮಾರ್, ಮುಡಿಪು ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮಜೀದ್ ಪೇರಿಮಾರ್, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ದೀಕ್ಷಿತ್ ಅತ್ತಾವರ, ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಮುಖಂಡ ಹಿಶಾಂ ಫರಂಗಿಪೇಟೆ, ಪುದು ಯುವ ಕಾಂಗ್ರೆಸ್ ಅಧ್ಯಕ್ಷ ನಿಝಾಂ ಕುಂಜತ್ತಕಲ್, ಪುದು ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ಕುಂಜತ್ತಕಲ್, ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಉಸ್ತುವಾರಿ ಸಮೀಝ್ ಫರಂಗಿಪೇಟೆ, ಪುದು ಯುವ ಕಾಂಗ್ರೆಸ್ ಸದಸ್ಯ ಇನ್ಶಾದ್ ಮಾರಿಪಳ್ಳ , ರಿಳ್ವಾನ್ ಅಮೆಮಾರ್, ಪಶ್ವತ್ ಫರಂಗಿಪೇಟೆ, ಸಲ್ಮಾನ್ ಫಾರಿಶ್, ತಶೀಕ್ ಫರಂಗಿಪೇಟೆ, ಫೈಝಲ್ ಫರಂಗಿಪೇಟೆ, ಶಾಹಿಲ್ ಅಮೆಮಾರ್ ನಿಶಾಮ್ ಕುಂಜತ್ತಕಲ್, ಹಕೀಂ ಮಾರಿಪಳ್ಳ, ಝಹೀರ್ ಮಾರಿಪಳ್ಳ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.
0 comments:
Post a Comment