ಬಂಟ್ವಾಳ, ಜೂನ್ 15, 2021 (ಕರಾವಳಿ ಟೈಮ್ಸ್) : ಪುದು ಗ್ರಾಮದ 45 ವರ್ಷ ಮೇಲ್ಪಟ್ಟವರಿಗೆ ಕೋವಿಶೀಲ್ಡ್ ಲಸಿಕಾ ಕ್ಯಾಂಪ್ ಜೂನ್ 16 ರಂದು ಬುಧವಾರ (ನಾಳೆ) ಬೆಳಿಗ್ಗೆ 9 ಗಂಟೆಗೆ ಸುಜೀರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.
ಪುದು ಗ್ರಾಮಸ್ಥರಿಗೆ ಮಾತ್ರ ಈ ಕ್ಯಾಂಪ್ ನಡಯಲಿದ್ದು ಗ್ರಾಮಸ್ಥರು ಇದರ ಸದುಪಯೋಗ ಪಡೆಯಬಹುದು.
ಇತ್ತೀಚೆಗೆ ಪುದು ಗ್ರಾ ಪಂ ವ್ಯಾಪ್ತಿಯ ಕೋವಿಡ್ ಕಾರ್ಯಪಡೆಯ ಸಭೆಯಲ್ಲಿ ಪುದು ಗ್ರಾಮಕ್ಕೆ ಸಂಬಂಧಿಸಿ ಪ್ರತ್ಯೇಕ ಲಸಿಕೆಯನ್ನು ಒದಗಿಸಿ ಕೊಡುವಂತೆ ಶಾಸಕ ಯು ಟಿ ಖಾದರ್ ಅವರಿಗೆ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಹಾಗೂ ಪಿಡಿಒ ಹರೀಶ್ ಅವರು ಕೋರಿಕೆ ಪ್ರಸ್ತಾವನೆ ಸಲ್ಲಿಸಿದ್ದರು. ಮನವಿಗೆ ಸ್ಪಂದಿಸಿದ ಶಾಸಕ ಖಾದರ್ ಅವರು ಈ ಪ್ರತ್ಯೇಕ ಲಸಿಕೆ ಒದಗಿಸಲು ಕ್ರಮ ಕೈಗೊಂಡ ಪ್ರಕಾರ ಈ ಕ್ಯಾಂಪ್ ನಡೆಯುತ್ತಿದೆ.
ಗ್ರಾಮಸ್ಥರ ಪರವಾಗಿ ಪಂಚಾಯತ್ ಸಲ್ಲಿಸಿದ ಬೇಡಿಕೆಗೆ ತುರ್ತಾಗಿ ಸ್ಪಂದಿಸಿದ ಕ್ಷೇತ್ರದ ಶಾಸಕ ಖಾದರ್ ಅವರಿಗೆ ಪಂಚಾಯತ್ ಅಧ್ಯಕ್ಷ ರಮ್ಲಾನ್, ಉಪಾಧ್ಯಕ್ಷೆ ಲೀಡಿಯಾ ಪಿಂಟೊ ಹಾಗೂ ಸರ್ವ ಸದಸ್ಯರು ಮತ್ತು ಪಿಡಿಒ ಹರೀಶ್ ಅವರು ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ.
0 comments:
Post a Comment