ಬಂಟ್ವಾಳ, ಜೂನ್ 02, 2021 (ಕರಾವಳಿ ಟೈಮ್ಸ್) : ಪುದು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಗೆ ಒಳಪಡುವ ಪುದು, ತುಂಬೆ, ಮೇರಮಜಲು, ಕಳ್ಳಿಗೆ, ಕೊಡ್ಮಾಣ್ ಗ್ರಾಮಗಳ 18-44 ವರ್ಷದವರೆಗಿನ ಭಿನ್ನ ಚೇತನ ವ್ಯಕ್ತಿಗಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ಸುಜೀರು ಸರಕಾರಿ ಪ್ರೌಡಶಾಲೆಯಲ್ಲಿ ಬುಧವಾರ ನಡೆಯಿತು.
ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿ ಪಂ ಮಾಜಿ ಸದಸ್ಯ ಹಾಗೂ ಸುಜೀರ್ ಪ್ರೌಡ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಉಮ್ಮರ್ ಫಾರೂಕ್ ಫರಂಗಿಪೇಟೆ, ಗ್ರಾ ಪಂ ಉಪಾಧ್ಯಕ್ಷೆ ಲೀಡಿಯಾ ಪಿಂಟೋ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಕೆ.ಎ, ಶಿಶು ಯೋಜನಾಧಿಕಾರಿ ಗಾಯತ್ರಿ ಎಚ್., ಪುದು ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ ಸುದರ್ಶನ್, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೀಲಾವತಿ, ಪುದು ಗ್ರಾಮ ಪಂಚಾಯತ್ ಸದಸ್ಯರಾದ ಇಕ್ಬಾಲ್ ಸುಜೀರ್, ಕಿಶೋರ್ ಸುಜೀರ್, ಆರೋಗ್ಯ ಇಲಾಖೆಯ ಕಿರಿಯ ಆರೋಗ್ಯ ಸಹಾಯಕಿ ಪಾರ್ವತಿ, ಮೇಲ್ವಿಚಾರಕಿಯರಾದ ಸರೋಜ ಭಟ್, ಸುಜಾತ, ಸುಜೀರ್ ಶಾಲಾ ನಿವೃತ್ತ ಅಧ್ಯಾಪಕ ಬಿ ಮಹಮ್ಮದ್ ತುಂಬೆ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಅಬ್ದುಲ್ ಸಲಾಂ, ಮಹಮ್ಮದ್ ಕೈಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
0 comments:
Post a Comment