ಅಂಚೆ ಜೀವ ವಿಮಾ ಹಾಗೂ ಗ್ರಾಮೀಣ ಅಂಚೆ ಜೀವ ವಿಮಾ ಗ್ರಾಹಕರಿಗೆ ದಂಡ ರಹಿತ ಪಾವತಿಗೆ ಅವಕಾಶ - Karavali Times ಅಂಚೆ ಜೀವ ವಿಮಾ ಹಾಗೂ ಗ್ರಾಮೀಣ ಅಂಚೆ ಜೀವ ವಿಮಾ ಗ್ರಾಹಕರಿಗೆ ದಂಡ ರಹಿತ ಪಾವತಿಗೆ ಅವಕಾಶ - Karavali Times

728x90

18 June 2021

ಅಂಚೆ ಜೀವ ವಿಮಾ ಹಾಗೂ ಗ್ರಾಮೀಣ ಅಂಚೆ ಜೀವ ವಿಮಾ ಗ್ರಾಹಕರಿಗೆ ದಂಡ ರಹಿತ ಪಾವತಿಗೆ ಅವಕಾಶ

ಮಂಗಳೂರು, ಜೂನ್ 18, 2021 (ಕರಾವಳಿ ಟೈಮ್ಸ್) : ಕೋವಿಡ್ ವೈರಸ್ ಹಾಗೂ ಲಾಕ್ ಡೌನ್ ಅವಧಿಯಲ್ಲಿ ಅಂಚೆ ಜೀವ ವಿಮಾ/ ಗ್ರಾಮೀಣ ಅಂಚೆ ಜೀವ ವಿಮಾ ಗ್ರಾಹಕರಿಗೆ ವಿಮೆಯ ಮಾಸಿಕ ಕಂತುಗಳನ್ನು ಪಾವತಿಸಲು ಅನಾನುಕೂಲವಾಗಿರುವುದರಿಂದ ಮೇ, ಜೂನ್ ಹಾಗೂ ಜುಲೈ 2021    ರ ಕಂತುಗಳನ್ನು ದಂಡ ರಹಿತವಾಗಿ ಪಾವತಿಸಲು ಅವಕಾಶ ನೀಡಲಾಗಿದೆ. 

ಅದೇ ರೀತಿ ಅಂಚೆ ಜೀವ ವಿಮಾ/ ಗ್ರಾಮೀಣ ಅಂಚೆ ಜೀವ ಕಂತುಗಳನ್ನು ಆನ್ ಲೈನ್ ಮೂಲಕ ಪಾವತಿಸಲು ಅವಕಾಶವಿದ್ದು ಗ್ರಾಹಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮಂಗಳೂರು ಅಂಚೆ ವಿಭಾಗದ ಇಮೇಲ್ ಐಡಿ domangalore.ka@indiapost.gov.in  ಮೂಲಕ ಸಂಪರ್ಕಿಸಬಹುದು ಎಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಧೀಕ್ಷಕರ ಕಛೇರಿ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಅಂಚೆ ಜೀವ ವಿಮಾ ಹಾಗೂ ಗ್ರಾಮೀಣ ಅಂಚೆ ಜೀವ ವಿಮಾ ಗ್ರಾಹಕರಿಗೆ ದಂಡ ರಹಿತ ಪಾವತಿಗೆ ಅವಕಾಶ Rating: 5 Reviewed By: karavali Times
Scroll to Top