ಮಂಗಳೂರು, ಜೂನ್ 20, 2021 (ಕರಾವಳಿ ಟೈಮ್ಸ್) : ರಾಜ್ಯ ಸರಕಾರದ ಅನ್ ಲಾಕ್ ಮಾರ್ಗಸೂಚಿಯಂತೆ ಮಂಗಳೂರು ಅಂಚೆ ವಿಭಾಗದ ಎಲ್ಲಾ ಅಂಚೆ ಕಚೇರಿಗಳು ನಾಳೆಯಿಂದ (ಜೂನ್ 21, 2021) ಸಹಜ ವ್ಯವಹಾರ ಸಮಯದಲ್ಲಿ ಕಾರ್ಯನಿರ್ವಹಿಸಲಿದೆ.
ಇಲಾಖಾ ಅಂಚೆ ಕಚೇರಿಗಳು ಸಂಜೆ 5 ರವರೆಗೆ ತೆರೆದಿರಲಿದ್ದು, ವ್ಯವಹಾರದ ಸಮಯ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2ರವರೆಗೆ ಇರಲಿದೆ. ಶಾಖಾ ಅಂಚೆ ಕಚೇರಿಗಳು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ರವರೆಗೆ ಸೇವೆ ನೀಡಲಿದೆ.
ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಅಂದರೆ ಎಪ್ರಿಲ್ 24 ರಿಂದ ಜೂನ್ 19ರವರೆಗೆ ಅಂಚೆ ಕಚೇರಿಗಳು ಮಧ್ಯಾಹ್ನ 12ರವರೆಗೆ ಮಾತ್ರ ವ್ಯವಹಾರ ನಡೆಸಿದ್ದವು. ಇದೀಗ ಸೇವೆಯ ಬದಲಾದ ಸಮಯವನ್ನು ಸಾರ್ವಜನಿಕರು ಗಮನಿಸುವಂತೆ ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಛೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment