ಬಂಟ್ವಾಳದ ಮೂರೂ ಪೊಲೀಸ್ ಠಾಣೆಗಳು ಮೇಲ್ದರ್ಜೆಗೆ : ಬಂಟ್ವಾಳ ಪೊಲೀಸ್ ವೃತ್ತ ಇನ್ನಿಲ್ಲ, ಎಲ್ಲ ಠಾಣೆಗಳಲ್ಲೂ ಪ್ರತ್ಯೇಕ ಇನ್ಸ್ ಪೆಕ್ಟರ್ ಗಳ ಕಾರ್ಯನಿರ್ವಹಣೆ  - Karavali Times ಬಂಟ್ವಾಳದ ಮೂರೂ ಪೊಲೀಸ್ ಠಾಣೆಗಳು ಮೇಲ್ದರ್ಜೆಗೆ : ಬಂಟ್ವಾಳ ಪೊಲೀಸ್ ವೃತ್ತ ಇನ್ನಿಲ್ಲ, ಎಲ್ಲ ಠಾಣೆಗಳಲ್ಲೂ ಪ್ರತ್ಯೇಕ ಇನ್ಸ್ ಪೆಕ್ಟರ್ ಗಳ ಕಾರ್ಯನಿರ್ವಹಣೆ  - Karavali Times

728x90

29 June 2021

ಬಂಟ್ವಾಳದ ಮೂರೂ ಪೊಲೀಸ್ ಠಾಣೆಗಳು ಮೇಲ್ದರ್ಜೆಗೆ : ಬಂಟ್ವಾಳ ಪೊಲೀಸ್ ವೃತ್ತ ಇನ್ನಿಲ್ಲ, ಎಲ್ಲ ಠಾಣೆಗಳಲ್ಲೂ ಪ್ರತ್ಯೇಕ ಇನ್ಸ್ ಪೆಕ್ಟರ್ ಗಳ ಕಾರ್ಯನಿರ್ವಹಣೆ 

 ಬಂಟ್ವಾಳ, ಜೂನ್ 30, 2021 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕಿನಲ್ಲಿ ಬಂಟ್ವಾಳ ನಗರ, ಗ್ರಾಮಾಂತರ ಹಾಗೂ ವಿಟ್ಲ ಪೊಲೀಸ್ ಠಾಣೆಗಳನ್ನೊಳಗೊಂಡ ಬಂಟ್ವಾಳ ಪೊಲೀಸ್ ವೃತ್ತವು ಬದಲಾದ ಸರಕಾರದ ಆದೇಶದಂತೆ ಇನ್ನಿಲದಾಗಿದ್ದು, ಈ ಮೂರೂ ಪೊಲೀಸ್ ಠಾಣೆಗಳು ಮೇಲ್ದರ್ಜೆಗೇರಿದೆ. 

ಪೊಲೀಸ್ ಇನ್ಸ್ ಪೆಕ್ಟರ್ ದರ್ಜೆಯ ಠಾಣೆಗಳಾಗಿ ಈ ಮೂರೂ ಠಾಣೆಗಳನ್ನು ಸರಕಾರ ಮೇಲ್ದರ್ಜೆಗೇರಿಸಿದ್ದು, ಎಲ್ಲಾ ಠಾಣೆಗಳಿಗೂ ಪ್ರತ್ಯೇಕ ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ. 

 ಬಂಟ್ವಾಳ‌ ನಗರ ಠಾಣೆಗೆ ಈ ಹಿಂದೆಯೇ ನೂತನ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಚೆಲುವರಾಜ್ ಅವರು ನಿಯುಕ್ತಿಗೊಂಡಿದ್ದರೆ, ಇದೀಗ ಮೇಲ್ದರ್ಜೆಗೇರಿರುವ ಬಂಟ್ವಾಳ‌ ಗ್ರಾಮಾಂತರ ಠಾಣೆಗೆ ಈ ಹಿಂದೆ ಬಂಟ್ವಾಳ ವೃತ್ತ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಟಿ ಡಿ ನಾಗರಾಜ್ ಅವರನ್ನೇ ಉಳಿಸಿಕೊಂಡು ಸರಕಾರ ಮಂಗಳವಾರ ಆದೇಶಿಸಿದರೆ, ವಿಟ್ಲ ಠಾಣೆಗೆ ನೂತನ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ನಾಗರಾಜ್ ಎಚ್ ಇ ಅವರನ್ನು ನೇಮಿಸಿ ಸರಕಾರ ಆದೇಶಿಸಿದೆ.   

ನಾಗರಾಜ್ ಎಚ್ ಇ ಅವರು ಈ ಹಿಂದೆ ವಿಟ್ಲ, ಪುತ್ತೂರು, ಕಡಬ, ಬಂಟ್ವಾಳ ಗ್ರಾಮಾಂತರ ಹಾಗೂ ವೇಣೂರು ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. 

 ಬಂಟ್ವಾಳದ ಮೂರೂ ಪೊಲೀಸ್ ಠಾಣೆಗಳು ಇದೀಗ ಮೇಲ್ದರ್ಜೆಗೇರಿದ್ದು, ತಾಲೂಕಿನಲ್ಲಿ‌ ಒಟ್ಟು ಮೂರು ಮಂದಿ ಇನ್ಸ್ ಪೆಕ್ಟರ್ ದರ್ಜೆಯ ಪೊಲೀಸ್ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದ ಮೂರೂ ಪೊಲೀಸ್ ಠಾಣೆಗಳು ಮೇಲ್ದರ್ಜೆಗೆ : ಬಂಟ್ವಾಳ ಪೊಲೀಸ್ ವೃತ್ತ ಇನ್ನಿಲ್ಲ, ಎಲ್ಲ ಠಾಣೆಗಳಲ್ಲೂ ಪ್ರತ್ಯೇಕ ಇನ್ಸ್ ಪೆಕ್ಟರ್ ಗಳ ಕಾರ್ಯನಿರ್ವಹಣೆ  Rating: 5 Reviewed By: karavali Times
Scroll to Top