ಬಂಟ್ವಾಳ, ಜೂನ್ 14, 2021 (ಕರಾವಳಿ ಟೈಮ್ಸ್) : ಇಂಧನ ಬೆಲೆ ಏರಿಕೆ ಮಾಡಿರುವ ಕೇಂದ್ರ ಸರಕಾರದ ವಿರುದ್ದ ಸಜಿಪಮೂಡ ಹಾಗೂ ಸಜಿಪಮುನ್ನೂರು ವಲಯ ಕಾಂಗ್ರೆಸ್ ವತಿಯಿಂದ ಸೋಮವಾರ ಬೆಳಿಗ್ಗೆ ಇಲ್ಲಿನ ಕಂದೂರು-ಕೊಡುಮಂದೂರು ಪೆಟ್ರೋಲ್ ಪಂಪ್ ಮುಂಭಾಗ “ಪೆಟ್ರೋಲ್-100 ನಾಟೌಟ್” ಪ್ರತಿಭಟನೆ ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದಲ್ಲಿ ನಡೆಯಿತು.
ಸಜಿಪಮೂಡ ಗ್ರಾ ಪಂ ಅಧ್ಯಕ್ಷೆ ಹರಿಣಾಕ್ಷಿ, ಉಪಾಧ್ಯಕ್ಷ ಸಿದ್ದೀಕ್ ಕೊಳಕೆ, ಸಜಿಪಮುನ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ ಯೂಸುಫ್ ಕರಂದಾಡಿ, ಸಜಿಪಮೂಡ ವಲಯ ಕಾಂಗ್ರೆಸ್ ಅಧ್ಯಕ್ಷ ಎನ್ ಕರೀಂ ಬೊಳ್ಳಾಯಿ, ಸಜಿಪಮೂಡ ಗ್ರಾ ಪಂ ಮಾಜಿ ಅಧ್ಯಕ್ಷರಾದ ದೇವಿಪ್ರಸಾದ್ ಪೂಂಜಾ, ವಿಶ್ವನಾಥ ಬೆಳ್ಚಡ, ಸಜಿಪಮೂಡ ಗ್ರಾ ಪಂ ಸದಸ್ಯರಾದ ಶೋಭಾ ಶೆಟ್ಟಿ, ಹಮೀದ್ ಕೊಳಕೆ, ಪ್ರಮೀಳಾ ಡಿ ಕ್ರೂಸ್, ಅಬ್ದುಲ್ ಅಝೀಝ್ ಬೊಳ್ಳಾಯಿ, ಇರಾ ಗ್ರಾ ಪಂ ಸದಸ್ಯ ಅಬ್ದುಲ್ ರಝಾಕ್ ಕುಕ್ಕಾಜೆ, ಪ್ರಮುಖರಾದ ಸೀತಾರಾಮ ಶೆಟ್ಟಿ ಮಿತ್ತಮಜಲು, ರಿಯಾಝ್ ಕೊಳಕೆ, ಮಯ್ಯದ್ದಿ ಕೊಳಕೆ, ಗಿರೀಶ್ ಪೆರುವ, ಹೊನ್ನಯ್ಯ ಸುವರ್ಣ ದಾಸರಗುಡ್ಡೆ, ಸಜಿಪಮೂಡ ಯುವ ಕಾಂಗ್ರೆಸ್ ಸದಸ್ಯ ಉಬೈದುಲ್ಲಾ ಕೊಳಕೆ, ಸಜಿಪಮುನ್ನೂರು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಅಝೀಝ್ ನಂದಾವರ-ಕೊಪ್ಪಳ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
0 comments:
Post a Comment