ಬಂಟ್ವಾಳ, ಜೂನ್ 05, 2021 (ಕರಾವಳಿ ಟೈಮ್ಸ್) : ಧರ್ಮಸ್ಥಳ ಯೋಜನೆ ವತಿಯಿಂದ 2 ಆಕ್ಸಿಜನ್ ಯಂತ್ರ ಹಾಗೂ 100 ಬೆಡ್ ಸೀಟ್ ಗಳನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು.
ಕೋವಿಡ್ ದ್ವಿತೀಯ ಅಲೆಯ ಹಿನ್ನಲೆಯಲ್ಲಿ ಶ್ರೀ ಕ್ಷೇತ್ರ ಧಮಸ್ಥಳ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಎಲ್ ಎಚ್ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯಾ ವತಿಯಿಂದ ಬಂಟ್ವಾಳ ತಾಲೂಕಿನ ಸರಕಾರಿ ಆಸ್ಪತ್ರೆ ಗೆ 2 ಪ್ರಾಣ ವಾಯು ಯಂತ್ರ (oxಥಿgeಟಿ ಛಿoಟಿಛಿeಟಿಣಡಿಚಿಣoಡಿ) ಹಾಗೂ 100 ಬೆಡ್ ಸಿಟ್ ಗಳನ್ನು ಆಸ್ಪತ್ರೆಯ ವೈದ್ಯಾಧಿಕಾರಿ ಪುಷ್ಪಲತಾ ಎನ್ ಅವರಿಗೆ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಹಸ್ತಾಂತರಿಸಿದರು. ತಾಲೂಕು ತಹಶೀಲ್ದಾರ್ ರಶ್ಮಿ ಎಸ್ ಆರ್, ಯೋಜನೆಯ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ, ತಾಲೂಕು ಜನ ಜಾಗೃತಿ ವೇದಿಕೆ ಅಧ್ಯಕ್ಷ ಬಾಲಕೃಷ್ಣ ಆಳ್ವ, ಬಿ ಸಿ ರೋಡು ವಲಯಾಧ್ಯಕ್ಷ ರೋನಾಲ್ಡ್ ಡಿ ಸೋಜ, ಯೋಜನಾಧಿಕಾರಿ ಮಹಾಂತೇಶ್, ತಾಲೂಕು ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸ್ವಪ್ನ, ಬಂಟ್ವಾಳ ಮೇಲ್ವಿಚಾರಕ ಕೇಶವ ಕೆ, ಬಿ ಸಿ ರೋಡು ಮೇಲ್ವಿಚಾರಕ ಗೋಪಾಲ, ಬಿ ಸಿ ರೋಡು ವಲಯಾಧ್ಯಕ್ಷ ಶೇಖರ ಸಾಮಾನಿ, ಬಂಟ್ವಾಳ ವಲಯಾಧ್ಯಕ್ಷ ವಸಂತ ಮೂಲ್ಯ, ಪ್ರಮುಖರಾದ ಸದಾನಂದ, ಸತ್ಯಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment