ಮಂಗಳೂರು, ಜೂನ್ 03, 2021 (ಕರಾವಳಿ ಟೈಮ್ಸ್) : ಮದುವೆಯಾಗುವಂತೆ ಪೀಡಿಸುತ್ತಿದ್ದ ಪುಡಿ ರೌಡಿಯೊಬ್ಬ ತನ್ನ ತಂಡದೊಂದಿಗೆ ಯುವತಿಯ ಮನೆಗೆ ನುಗ್ಗಿ, ಮನೆಯ ಸಾಮಗ್ರಿಗಳನ್ನು ಧ್ವಂಸ ಮಾಡಿದ್ದು, ಘಟನೆಗೆ ಸಂಬಂಧಿ ಕಾರ್ಯಪ್ರವೃತ್ತರಾದ ಮಂಗಳೂರು ಪೊಲೀಸರು ರೌಡಿ ತಂಡವನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ನಗರದ ಶಕ್ತಿನಗರದಲ್ಲಿ ಮೇ 30ರ ರಾತ್ರಿ ಏಳೆಂಟು ಮಂದಿಯ ತಂಡ ಮನೆಗೆ ನುಗ್ಗಿ ಇಬ್ಬರು ಗಂಡು ಮಕ್ಕಳನ್ನು ಕೇಳಿ ದಾಂಧಲೆ ಮಾಡಿದೆ. ಗಂಡು ಮಕ್ಕಳು ಮನೆಯಲ್ಲಿಲ್ಲ ಇಲ್ಲದ್ದರಿಂದ ತಂಡ ಇಡೀ ಮನೆಯನ್ನು ಪುಡಿಗೈಯಲು ಆರಂಭಿಸಿತ್ತು. ಮನೆಯಲ್ಲಿದ್ದ ವಯಸ್ಸಾದವರನ್ನೂ ಬಿಡದೆ ಎಲ್ಲರಿಗೂ ಥಳಿಸಿ ಹೋಗಿತ್ತು. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಬಳಿಕ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲ್ಲೆಗೈದಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಪೈಕಿ ಬಂಟ್ವಾಳ ತಾಲೂಕಿನ ಬಾರೆಕ್ಕಾಡು ನಿವಾಸಿ ಹೇಮಂತ್ (22), ರೌಡಿಶೀಟರ್ ರಂಜಿತ್ (28), ಉರ್ವಾ ಸ್ಟೋರ್ ನಿವಾಸಿ ಅವಿನಾಶ್ (23), ಕೊಟ್ಟಾರ ಚೌಕಿಯ ಪ್ರಜ್ವಲ್ (24), ಕೋಡಿಬೆಂಗ್ರೆ ನಿವಾಸಿ ದೀಕ್ಷಿತ್ (21), ಉರ್ವಾ ಸ್ಟೋರಿನ ಧನುಷ್ (19), ಕುಂಜತ್ ಬೈಲಿನ ಯತಿರಾಜ್ (23) ಬಂಧಿತ ಆರೋಪಿಗಳು.
ಶಕ್ತಿನಗರ ನಿವಾಸಿ 18 ವರ್ಷದ ಯುವತಿಯನ್ನು ರೌಡಿಶೀಟರ್ ಹೇಮಂತ್ ಪ್ರೀತಿಸುತ್ತಿದ್ದ. ಆದರೆ ಯುವತಿ ಈತನನ್ನು ನಿರಾಕರಿಸಿದ್ದಳು ಎನ್ನಲಾಗಿದೆ. ಬಳಿಕ ತಾನು ಕರೆದ ಕಡೆ ಬರಬೇಕು, ನನಗೆ ಇಷ್ಟ ಆಗುವ ಹಾಗೆ ಇರಬೇಕು ಎಂದು ರೌಡಿಶೀಟರ್ ಹೇಮಂತ್ ಯುವತಿಗೆ ತಾಕೀತು ಮಾಡಿದ್ದ. ಯುವತಿ ಇದನ್ನು ತನ್ನ ಅಣ್ಣಂದಿರಿಗೆ ಹೇಳಿದ್ದಳು. ಈ ಬಗ್ಗೆ ಯುವತಿಯ ಅಣ್ಣಂದಿರು ಹೇಮಂತ್ ಗೆ ಕರೆ ಮಾಡಿ ಎಚ್ಚರಿಕೆ ನೀಡಿ, ತಂಗಿಯ ಸಹವಾಸಕ್ಕ ಬರಬೇಡ ಎಂದು ಹೇಳಿದ್ದರು. ಈ ದ್ವೇಷದಿಂದ ಘಟನೆ ನಡೆದಿದೆ ಎಂದು ಪೊಲೀಸ್ ತನಿಖೆಯ ವೇಳೆ ಗೊತ್ತಾಗಿದೆ.
0 comments:
Post a Comment