ಸಾಮಾಜಿಕ ತಾಣಗಳಲ್ಲಿ ಅವಮಾನಕಾರಿ ಸಂದೇಶ : ನಾಲ್ವರ ಬಂಧಿಸಿದ ಮಂಗಳೂರು ಪೊಲೀಸ್ - Karavali Times ಸಾಮಾಜಿಕ ತಾಣಗಳಲ್ಲಿ ಅವಮಾನಕಾರಿ ಸಂದೇಶ : ನಾಲ್ವರ ಬಂಧಿಸಿದ ಮಂಗಳೂರು ಪೊಲೀಸ್ - Karavali Times

728x90

2 June 2021

ಸಾಮಾಜಿಕ ತಾಣಗಳಲ್ಲಿ ಅವಮಾನಕಾರಿ ಸಂದೇಶ : ನಾಲ್ವರ ಬಂಧಿಸಿದ ಮಂಗಳೂರು ಪೊಲೀಸ್

ಮಂಗಳೂರು, ಜೂನ್ 02, 2021 (ಕರಾವಳಿ ಟೈಮ್ಸ್) : ದುರ್ಗವಾಹಿನಿ ಸಂಘಟನೆ ಮತ್ತು ವಿಶ್ವ ಹಿಂದೂ ಪರಿಷತ್ ನಾಯಕ ಶರಣ್ ಪಂಪ್ವೆಲ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶಗಳನ್ನು ಹಂಚಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 4 ಮಂದಿಯನ್ನು ಮಂಗಳೂರು ನಗರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

 ಬಂಧಿತರನ್ನು ಸುಳ್ಯ ಕಸಬಾ ನಿವಾಸಿ ಭವಾನಿ ಶಂಕರ್ (32), ಮಂಗಳೂರು- ಬಜಾಲ್ ನಿವಾಸಿ ನೌಶಾದ್ (27), ಕಾವೂರು ನಿವಾಸಿ ರವಿ ಎಲಿಯಾಸ್ ಟಿಕ್ಕಿ ರವಿ (38), ಮೂಡಿಬಿದಿರೆಯ ಧರೆಗುಡ್ಡೆ ನಿವಾಸಿ ಜಯ ಕುಮಾರ್ (33) ಎಂದು ಗುರುತಿಸಲಾಗಿದೆ.

ಪೊಲೀಸ್ ಆಯುಕ್ತ ಎನ್ .ಶಶಿ ಕುಮಾರ್ ಅವರ ನಿರ್ದೇಶನದಂತೆ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಹರಿರಾಮ್ಶಂಕರ್ ಮಾರ್ಗದರ್ಶನದಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಸಾಮಾಜಿಕ ತಾಣಗಳಲ್ಲಿ ಅವಮಾನಕಾರಿ ಸಂದೇಶ : ನಾಲ್ವರ ಬಂಧಿಸಿದ ಮಂಗಳೂರು ಪೊಲೀಸ್ Rating: 5 Reviewed By: karavali Times
Scroll to Top