ಲಾಕ್-ಅನ್ ಲಾಕ್ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಅನಿಶ್ಚಿತತೆ-ಗೊಂದಲ, ಉಸ್ತುವಾರಿ-ಡೀಸಿ ಮಧ್ಯೆ ಮೂಡದ ಒಮ್ಮತ  - Karavali Times ಲಾಕ್-ಅನ್ ಲಾಕ್ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಅನಿಶ್ಚಿತತೆ-ಗೊಂದಲ, ಉಸ್ತುವಾರಿ-ಡೀಸಿ ಮಧ್ಯೆ ಮೂಡದ ಒಮ್ಮತ  - Karavali Times

728x90

19 June 2021

ಲಾಕ್-ಅನ್ ಲಾಕ್ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಅನಿಶ್ಚಿತತೆ-ಗೊಂದಲ, ಉಸ್ತುವಾರಿ-ಡೀಸಿ ಮಧ್ಯೆ ಮೂಡದ ಒಮ್ಮತ 

 ಮಂಗಳೂರು, ಜೂನ್ 20, 2021 (ಕರಾವಳಿ ಟೈಮ್ಸ್) : ರಾಜ್ಯದ ಸೋಂಕು ಕಡಿಮೆ ಇರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ನಿಯಮ ಮತ್ತಷ್ಡು ಸಡಿಲಗೊಳಿಸಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. 

ಶೇ 5 ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ ಬೆಳಿಗ್ಗೆ 5 ರಿಂದ ಸಂಜೆ 5 ರವರೆಗೆ ಎಲ್ಲಾ ಸೇವೆಗಳ ಕಾರ್ಯನಿರ್ವಹಣೆಗೆ ಅವಕಾಶ ಕಲ್ಪಿಸಲಾಗಿದೆ. 

ಶೇಕಡಾ 5ಕ್ಕಿಂತ ಮೇಲ್ಪಟ್ಟ ಪಾಸಿಟಿವಿಟಿ ದರ ಇರುವ ದಕ್ಷಿಣ ಕನ್ನಡ, ಉಡುಪಿ ಸಹಿತ ಇರುವ ಜಿಲ್ಲೆಗಳಲ್ಲಿ ಜೂನ್ 11 ರಂದು ಘೋಷಿಸಲಾದ ಸಡಿಲ ನಿಯಮಗಳು ಅನ್ವಯಿಸಲಿದೆ ಅಂದರೆ ಅಪರಾಹ್ನ 2 ಗಂಟೆವರೆಗೆ ಅಗತ್ಯ ಸೇವಾ ಚಟುವಟಿಕೆಗಳ ಕಾರ್ಯನಿರ್ವಹಣೆಗೆ ಅವಕಾಶ ಇದೆ ಎಂದು ಸ್ಪಷ್ಟವಾಗಿ ಸಿಎಂ ಘೋಷಿಸಿದ್ದರೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರುಗಳ ಮಧ್ಯೆ ಸಹಮತ ಮೂಡದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಇನ್ನೂ ಸೋಮವಾರದ ಬಳಿಕದ ಲಾಕ್ -ಅನ್ ಲಾಕ್ ಬಗ್ಗೆ ಅನಿಶ್ಚಿತತೆ, ಗೊಂದಲ ಜನರಲ್ಲಿ ಮನೆ ಮಾಡಿದೆ. 

 ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಜಿಲ್ಲೆಯಲ್ಲಿ ಲಾಕ್ ಡೌನ್ ನಿಯಮ ಸಡಿಲಿಕೆ ಮಾಡುವುದು ನಮ್ಮ ಉದ್ದೇಶವಾಗಿದ್ದು ಭಾನುವಾರ ಶಾಸಕರ ಸಭೆ ಕರೆದು ಈ ಬಗ್ಗೆ ತೀರ್ಮಾನಕ್ಕೆ ಬರಲಾಗುವುದು ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದರೆ, ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆವಿ ಅವರು ಜಿಲ್ಲೆಯಲ್ಲಿ ಜನರ ಸಹಕಾರ ನೋಡಿಕೊಂಡು ಮುಂದಿನ ದಿನಗಳಲ್ಲಿ ಅನ್ ಲಾಕ್ ಬಗ್ಗೆ ತೀರ್ಮಾನಿಸಲಾಗುವುದು, ಸದ್ಯ ಇರುವ ಲಾಕ್ ಡೌನ್ ನಿರ್ಬಂಧ ಜಿಲ್ಲೆಯಲ್ಲಿ ಮುಂದುವರೆಸುವ ಬಗ್ಗೆ ಸೂಚನೆ ನೀಡಿದ್ದಾರೆ. 

 ಒಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜನ ಮಾತ್ರ ಜನಪ್ರತಿನಿಧಿ-ಅಧಿಕಾರಿಗಳ ಮಧ್ಯೆ ಮೂಡದ ಒಮ್ಮತದಿಂದ ಗೊಂದಲ ಹಾಗೂ ಅನಿಶ್ಚಿತತೆ ಎದುರಿಸುವಂತಾಗಿದೆ. 

ಲಾಕ್ ಡೌನ್ ಮುಂದುವರಿಸುವ ತೀರ್ಮಾನ ಎರಡು-ಮೂರು ದಿನಗಳ ಮುಂಚಿತವಾಗಿ ಘೋಷಿಸುವ ಆಡಳಿತ ಅನ್ ಲಾಕ್ ನಿಯಮ ಘೋಷಣೆ ಮಾತ್ರ ಮುಂಚಿನ ದಿನದವರೆಗೂ ಸ್ಪಷ್ಟ ನಿರ್ಧಾರಕ್ಕೆ ಬಾರದೆ ಇರುವ ಕಾರಣದಿಂದಾಗಿ ಜನ ತಮ್ಮ ದೈನಂದಿನ ಚಟುವಟಿಕೆಗಳ ಬಗ್ಗೆ ತೀರ್ಮಾನಕ್ಕೆ ಬರಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿ ಗೊಂದಲವನ್ನು ಎದುರಿಸುವಂತಾಗಿದೆ. ಮಧ್ಯಾಹ್ನದವರೆಗಾದರೂ ಅನ್ ಲಾಕ್ ನಿಯಮ‌ ಘೋಷಣೆ ಹಾಗೂ ಸರಕಾರಿ ಕಛೇರಿಗಳ ಸೇವೆಗಳಾದರೂ ಸ್ವಲ್ಪ ಮಟ್ಟಿಗೆ ದೊರೆಯಲಿದೆ ಎಂಬ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಜನ ಇದೀಗ ಉಸ್ತುವಾರಿ ಸಚಿವರ, ಶಾಕಸರ ಹಾಗೂ ಜಿಲ್ಲಾಧಿಕಾರಿಗಳ ಮಧ್ಯಾಹ್ನದ ಸಭೆವರೆಗೂ ಕಾಯಬೇಕಾಗಿದೆ. 

 ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಸಾಕಷ್ಟು ನಿಯಂತ್ರಣದಲ್ಲಿದ್ದು ಜನ ಸರಕಾರದ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಿರುವ ಕಾರಣದಿಂದಲೇ ಇದು ಸಾಧ್ಯವಾಗಿದೆ. ಇನ್ನು ಕೆಲವೆಡೆ ನಿರ್ಲಕ್ಷ್ಯ ಕಂಡು ಬಂದರೆ ಅದಕ್ಕೆ ಅಧಿಕಾರಿ ವರ್ಗವೇ ಕಾರಣವಾಗಿದೆ. ಕೆಲವೆಡೆ ಅಂಗಡಿ- ಹೋಟೆಲ್ ಗಳು ಅವಧಿ ಕಳೆದರೂ ದಿನಪೂರ್ತಿ ತೆರೆದು ಜನ ಸೇರಿಸುವಂತಿದ್ದರೆ, ವಿವಿಧ ರಾಜಕೀಯ ಪಕ್ಷಗಳು ಸೇವೆಯ ಹೆಸರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರೆ, ಜನ-ಯುವಕರು ಬೇಕಾಬಿಟ್ಟಿ ಖಾಸಗಿ ವಾಹನಗಳಲ್ಲಿ ತಿರುಗಾಟ ನಡೆಸುತ್ತಿದ್ದರೆ ಇದಕ್ಕೆಲ್ಲ ಅಧಿಕಾರಿ ವರ್ಗ ಸರಕಾರದ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲನೆ ಮಾಡದೆ ಸ್ಪಷ್ಟ ನಿರ್ಲಕ್ಷ್ಯ ತಾಳಿರುವುದೇ ಕಾರಣ ಹೊರತು ಜನ ಕಾರಣರಲ್ಲ ಎಂಬುದು ಸ್ಪಷ್ಟವಾಗುತ್ತಿದೆ. 

ಸರಕಾರ ಹಾಗೂ ಅಧಿಕಾರಿಗಳು ಜನರಿಗೆ ಪೂರಕವಾಗುವ ನಿಟ್ಟಿನಲ್ಲಿ ನ್ಯಾಯೋಚಿತ ಕ್ರಮಗಳನ್ನು ಕೈಗೊಂಡರೆ ಜನರೂ ಕೂಡಾ ಪೂರಕ ಸ್ಪಂದನೆಯನ್ನೇ ನೀಡುವ ಮೂಲಕ ಸೋಂಕು ನಿಯಂತ್ರಣಕ್ಕೆ ಸರಕಾರದೊಂದಿಗೆ ಕೈ ಜೋಡಿಸಲಿದ್ದಾರೆ ಎನ್ನುವುದು ಸ್ಪಷ್ಟ.

 ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರದಿಂದ ಯಾವ ರೀತಿಯ ಲಾಕ್-ಅನ್ ಲಾಕ್ ಆಗಲಿದೆ ಎಂಬುದಕ್ಕೆ ಜನ ಭಾನುವಾರ ಮಧ್ಯಾಹ್ನದವರೆಗೂ ಕಾಯಬೇಕಾಗಿದೆ.

  • Blogger Comments
  • Facebook Comments

1 comments:

  1. Clearly, how DC of Udupi and DK DC are reflecting in reducing covid. People are definitely not responsible, as they are following rules. Wah! to DC of Udupi. Congratulations to him. However, those DCs have proven inefficient should be transferred immediately to bring covid in control.

    ReplyDelete

Item Reviewed: ಲಾಕ್-ಅನ್ ಲಾಕ್ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಅನಿಶ್ಚಿತತೆ-ಗೊಂದಲ, ಉಸ್ತುವಾರಿ-ಡೀಸಿ ಮಧ್ಯೆ ಮೂಡದ ಒಮ್ಮತ  Rating: 5 Reviewed By: karavali Times
Scroll to Top